ಹೊಸ ವರ್ಷಕ್ಕೆ ಹಾಲಿದ ದರ ಏರಿಕೆ ಶಾಕ್
ಹೊಸ ವರ್ಷದ ಆರಂಭದಲ್ಲೇ ನಂದಿನ ಹಾಲು, ಮೊಸರು ಸೇರಿದಂತೆ ಉತ್ಪನ್ನಗಳ ದರ ಏರಿಕೆಗೆ ಸರ್ಕಾರದ ಮುಂದೆ ಹಾಲು ಒಕ್ಕೂಟಗಳು ಪ್ರಸ್ತಾವನೆ ಸಲ್ಲಿಸಿವೆ.
ನಮಗೆ ನಷ್ಟವಾಗಿದೆ. ಹಾಲಿನ ದರ ಹೆಚ್ಚಳ ಮಾಡಿ ನಮಗೆ ಪರಿಹಾರ ಕೊಡಿ ಎಂದು ಹಾಲು ಒಕ್ಕೂಟಗಳು ಮುಖ್ಯಮಂತ್ರಿ ಮುಂದೆ ಪ್ರಸ್ತಾವನೆ ಸಲ್ಲಿಸಿವೆ. ಇದಕ್ಕೆ ಹೊಸ ವರ್ಷದ ಆರಂಭದಲ್ಲಿ ಒಪ್ಪಿಗೆ ಸಿಗುವ ಸಾಧ‍್ಯತೆಯಿದೆ. ಹೀಗಾಗಿ ಹೊಸ ವರ್ಷದ ಆರಂಭದಲ್ಲೇ ಬೆಲೆ ಏರಿಕೆಗೆ ಸಿದ್ಧರಾಗಿ.