ಹೆದ್ದಾರಿ ತಡೆ ನಡೆಸಿದ ರೈತರು

ಬುಧವಾರ, 3 ಏಪ್ರಿಲ್ 2019 (14:24 IST)
ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಭದ್ರಾ ಜಲಾಶಯದ ಕೊನೆ ಭಾಗದ ಜನರು ಆಕ್ರೋಶಗೊಂಡಿದ್ದಾರೆ.

ಹರಿಹರ- ದಾವಣಗೆರೆ ತಾಲ್ಲೂಕಿನ ರೈತರಿಂದ ಹೆದ್ದಾರಿ ತಡೆದು ಆಕ್ರೋಶ ವ್ಯಕ್ತಪಡಿಸಲಾಗಿದೆ. ಭದ್ರ ಜಲಾಶಯದ ಕೊನೆಯ ಭಾಗದ ರೈತರಿಂದ ಪ್ರತಿಭಟನೆ ನಡೆದಿದೆ.

ಭದ್ರ ಅಚ್ಚುಕಟ್ಟು ಪ್ರದೇಶದ ರೈತರ ಭತ್ತದ ಬೆಳೆಗೆ ನೀರು ಪೂರೈಸಲು ಅಧಿಕಾರಿಗಳು ವಿಫಲವಾಗಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯ ಖಂಡಿಸಿ ದಾವಣಗೆರೆ ಜಿಲ್ಲೆ ಹರಿಹರದ ಬಳಿ ಹೆದ್ದಾರಿ ಎನ್ ಎಚ್ 4 ರ ಕುಂದುವಾಡ ಕ್ರಾಸ್ ಬಳಿ ರೈತರಿಂದ ಪ್ರತಿಭಟನೆ ನಡೆಸಲಾಯಿತು.

ಹರಿಹರ ತಾಲೂಕಿನ ಬನ್ನಿಕೊಡು ಬೇವನಹಳ್ಳಿ, ಸತ್ಯನಾರಾಯಣ ಕ್ಯಾಂಪ್  ಹಾಗೂ ದಾವಣಗೆರೆ ತಾಲೂಕಿನ ಬಾತಿ,ಕುಂದವಾಡ ಗ್ರಾಮದ ರೈತರಿಂದ ಪ್ರತಿಭಟನೆ ನಡೆಯಿತು.

ಪ್ರತಿಭಟನೆ ಬಿಸಿಗೆ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಹೆದ್ದಾರಿಯಲ್ಲಿಯೆ ನಿಂತುಕೊಂಡ ವಾಹನಗಳ ಚಾಲಕರು ಪರದಾಡಿದರು. ನೀರಾವರಿ ಇಲಾಖೆ ಅಧಿಕಾರಿ ಕೊಟ್ರೇಶ್ ಗೆ ರೈತರು ಬೆವರಳಿಸಿದ ಘಟನೆಯೂ ನಡೆಯಿತು. ನೂರಾರು ರೈತರಿಂದ ಕುಂದುವಾಡ ಕ್ರಾಸ್ ಬಳಿ ಹೆದ್ದಾರಿ ತಡೆ ನಡೆಯಿತು.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ