ಎರಡನೇ ಹೆಂಡತಿ ಮಾತು ಕೇಳಿ ಮಕ್ಕಳಿಗೇ ಚಿತ್ರಹಿಂಸೆ ಕೊಡುತ್ತಿದ್ದ ತಂದೆ

ಗುರುವಾರ, 24 ಜೂನ್ 2021 (13:40 IST)
ಬೆಂಗಳೂರು: ಎರಡನೇ ಪತ್ನಿಯ ಚಾಡಿ ಮಾತು ಕೇಳಿಕೊಂಡು ತನ್ನ ಮೂವರು ಮಕ್ಕಳಿಗೇ ಚಿತ್ರಹಿಂಸೆ ಕೊಡುತ್ತಿದ್ದ ಪಾಪಿ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ.

 
ರಾಗಿಗುಡ್ಡ ನಿವಾಸಿ ಸೆಲ್ವನ್ ಹಾಗೂ ಆತನ ಎರಡನೇ ಪತ್ನಿ ಸತ್ಯಾ ಬಂಧಿತ ದಂಪತಿ. ಈ ಇಬ್ಬರೂ ಮೂವರು ಮಕ್ಕಳ ಬಾಯಿಗೆ ಬಟ್ಟೆ ತುರುಕಿ, ಮೈ ಕೈಗೆಲ್ಲಾ ಬರೆ ಹಾಕುತ್ತಿದ್ದುದಲ್ಲದೇ, ಸ್ಕ್ರೂ ಡ್ರೈವರ್ ನಿಂದ ಗಾಯ ಮಾಡಿ ಚಿತ್ರಹಿಂಸೆ ನೀಡುತ್ತಿದ್ದರು.

ಇದು ನೆರೆಹೊರೆಯವರ ಗಮನಕ್ಕೆ ಬಂದು ಪೊಲೀಸರಿಗೆ ದೂರು ನೀಡಿದ್ದಾರೆ. ಸೆಲ್ವನ್ ಮೊದಲ ಪತ್ನಿ ಮೂರು ತಿಂಗಳಷ್ಟೇ ಹಿಂದಷ್ಟೇ ತೀರಿಕೊಂಡಿದ್ದಳು. ಅದಕ್ಕೂ ಮೊದಲೇ ಮೊದಲ ಪತ್ನಿಗೆ ತಿಳಿಯದೇ ಸತ್ಯಾ ಜೊತೆ ಕೆಲವು ವರ್ಷಗಳಿಂದ ಸಂಬಂಧವಿಟ್ಟುಕೊಂಡಿದ್ದ. ಆ ಸಂಬಂಧದಲ್ಲೂ ಆತನಿಗೆ ಇಬ್ಬರು ಮಕ್ಕಳಿದ್ದಾರೆ. ಆದರೆ ಅವರು ಜೊತೆಗೇ ವಾಸಿಸುತ್ತಿಲ್ಲ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ