ಸಂಕ್ರಮಣ ದಿನ ದುರ್ಘಟನೆ: ಒಂದೇ ಕುಟುಂಬದ ಐವರು ನೀರುಪಾಲು
ಅಂತ್ಯಕ್ರಿಯೆ ಮುಗಿಸಿಕೊಂಡು ಮನೆಗೆ ವಾಪಾಸ್ ಆಗುತ್ತಿದ್ದ ಐದು ಜನರಿದ್ದ ಕಾರು ಪಲ್ಟಿಯಾಗಿ ಕಾಲುವೆಗೆ ಬಿದ್ದಿದೆ. ಇದರಿಂದಾಗಿ ಕಾರಿನಲ್ಲಿದ್ದ ಐದೂ ಜನರು ಮುಳುಗಿ ಸಾವನ್ನಪ್ಪಿದ್ದಾರೆ. ಕಡಬಿ ಗ್ರಾಮದ ಒಂದೇ ಕುಟುಂಬದ ನಿವಾಸಿಗಳಾದ ಪಕ್ಕೀರವ್ವ ಪೂಜೇರಿ(29), ಹನುಮಂತ ಪೂಜೇರಿ(60), ಲಗಮಣ್ಣ ಪೂಜೇರಿ(38), ಪಾರವ್ವ ಪೂಜೇರಿ(50), ಲಕ್ಷ್ಮೀ ಪೂಜೇರಿ(40) ಮೃತ ದುರ್ದೈವಿಗಳು ಎಂದು ಗುರುತಿಸಲಾಗಿದೆ.
ಕಾರು ಚಾಲಕ ಅಡಿವೆಪ್ಪ ಮಾಳಗಿ ಕಾರು ಕಾಲುವೆಗೆ ಬೀಳುತ್ತಿದ್ದಂತೆ ಈಜಿ ದಡ ಸೇರುವ ಮೂಲಕ ಬದುಕುಳಿದಿದ್ದಾನೆ.