ನರೇಂದ್ರ ಮೋದಿ ಭಾಷಣಕ್ಕೆ ಕಾಂಗ್ರೆಸ್ ಸಂಸದ ಫಿದಾ

ಭಾನುವಾರ, 18 ಆಗಸ್ಟ್ 2019 (21:43 IST)

ಸ್ವಾತಂತ್ರ್ಯ ದಿನಾಚರಣೆಯಂದು ಪ್ರಧಾನಿ ನರೇಂದ್ರ ಮೋದಿ ಮಾಡಿದ ಭಾಷಣದಿಂದಾಗಿ ಕಾಂಗ್ರೆಸ್ ಸಂಸದ ಹಾಗೂ ನಟ ಶತ್ರುಘ್ನ ಸಿನ್ಹ ಫಿದಾ ಆಗಿದ್ದಾರೆ.

ಪ್ರಧಾನಿ ಮೋದಿಯವರನ್ನು ಮೆಚ್ಚಿ ಟ್ವೀಟ್ ಮಾಡಿರೋ ಕಾಂಗ್ರೆಸ್ ಸಂಸದ ಶತ್ರುಘ್ನ ಸಿನ್ಹ, ಮೋದಿಯವರ ಭಾಷಣ ಉತ್ತಮ ಅಂಶಗಳು, ಸಂಶೋಧನೆಗಳಿಂದ ಕೂಡಿದೆ. ಅವರು ಧೈರ್ಯಶಾಲಿಯಾಗಿ ಹೇಳಿರೋ ಮಾತು ದೇಶದ ಜನರಲ್ಲಿ ಸ್ಫೂರ್ತಿ ತುಂಬುತ್ತದೆ ಎಂದಿದ್ದಾರೆ.

ಈ ಮೊದಲು ಬಿಜೆಪಿಯಲ್ಲಿದ್ದ ಶತ್ರುಘ್ನ ಸಿನ್ಹ, ಲೋಕಸಭೆ ಚುನಾವಣೆ ಸಂದರ್ಭ ಕೈ ಪಡೆಗೆ ಸೇರಿ ಕಾಂಗ್ರೆಸ್ ನಿಂದ ಸಂಸದರಾಗಿ ಆಯ್ಕೆಯಾಗಿದ್ದಾರೆ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ