ಗಣಿಗಾರಿಕೆ ಮಾಡುತ್ತಿದ್ದ ಮಾಲೀಕ ಪೊಲೀಸರ ಕಂಡು ಪರಾರಿ!

ಮಂಗಳವಾರ, 18 ಡಿಸೆಂಬರ್ 2018 (14:35 IST)
ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದ ಕಲ್ಲು ಕೋರೆ ಮೇಲೆ ಪೊಲೀಸರು ದಾಳಿನಡೆಸಿದ್ದಾರೆ.

ಪೊಲೀಸರು ದಾಳಿ ಮಾಡಿ 2 ಲಕ್ಷ 90 ಸಾವಿರ ರೂ. ಮೌಲ್ಯದ ಕಲ್ಲು ಗಣಿಗಾರಿಕೆಗೆ ಬಳಸುತ್ತಿದ್ದ ಸ್ಫೋಟಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಹೆಚ್.ತಿಮ್ಮಾಪುರದಲ್ಲಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.  ಹೆಚ್.ತಿಮ್ಮಾಪುರ ಗ್ರಾಮದ ಸರ್ವೆ ನಂಬರ್ 26 ರಲ್ಲಿ ಭದ್ರಾವತಿ ಮೂಲದ ಅರುಣ್ ಕುಮಾರ್ ಎಂಬುವರು ಪರವಾನಗಿ ಪಡೆಯದೆ ಅಕ್ರಮವಾಗಿ ಗಲ್ಲು ಗಣಿಗಾರಿಕೆ ನಡೆಸುತ್ತಿದ್ದರು. ಅಲ್ಲದೇ ಸ್ಫೋಟಕ ವಸ್ತುಗಳನ್ನ ಬಳಸಿ ಕಲ್ಲು ಕೋರೆಯನ್ನು ನಡೆಸುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ತರೀಕೆರೆ ಇನ್ಸ್‌ಪೆಕ್ಟರ್ ಜಯಂತ್ ಎಲ್. ಗೌಳಿ, ಕಲ್ಲು ಕೋರೆ ಮೇಲೆ ದಾಳಿ ಮಾಡಿದ್ದಾರೆ.

ಈ ವೇಳೆ ಪೊಲೀಸರನ್ನು ಕಂಡ ಮಾಲೀಕ ಅರುಣ್ ಕುಮಾರ್ ಸ್ಥಳದಿಂದ ಪರಾರಿಯಾಗಿದ್ದಾನೆ. ಸ್ಥಳದಲ್ಲಿದ್ದ 2 ಲಕ್ಷ 90 ಸಾವಿರ ರೂ ಮೌಲ್ಯದ ಸ್ಫೋಟಕ ವಸ್ತುಗಳನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ತರೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ