ಕಲುಷಿತ ನೀರು ಸೇವಿಸಿ ಐವರು ಸಾವು : ಮೃತರ ಕುಟುಂಬಕ್ಕೆ ಪರಿಹಾರ

ಭಾನುವಾರ, 6 ಆಗಸ್ಟ್ 2023 (14:49 IST)
ಚಿತ್ರದುರ್ಗ : ಇಲ್ಲಿನ ಕವಾಡಿಗರಹಟ್ಟಿಯ ದಲಿತ ಕಾಲೊನಿಯಲ್ಲಿ ಕಲುಷಿತ ನೀರು ಸೇವಿಸಿ ಮೃತಪಟ್ಟವರ ಕುಟುಂಬಸ್ಥರಿಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ತಲಾ 10 ಲಕ್ಷ ರೂ. ಪರಿಹಾರದ ಚೆಕ್ ವಿತರಿಸಿದರು.

ಮುಖ್ಯಮಂತ್ರಿ ಪರಿಹಾರ ನಿಧಿ ಮತ್ತು ಸ್ಥಳೀಯ ಸಂಸ್ಥೆಯಿಂದ ತಲಾ 5 ಲಕ್ಷ ರೂ. ಸೇರಿ ಮೃತರಾದ ಮಂಜುಳಾ, ರಘು, ಪ್ರವೀಣ್, ತಿಪ್ಪೇರುದ್ರಪ್ಪ, ಪಾರ್ವತಮ್ಮ ಕುಟುಂಬದ ಸದಸ್ಯರಿಗೆ ತಲಾ 10 ಲಕ್ಷ ರೂ.ನಂತೆ ಪರಿಹಾರ ಚೆಕ್ ವಿತರಿಸಲಾಯಿತು. 

ಘಟನಾ ಸ್ಥಳಕ್ಕೆ ಶನಿವಾರ ಆಗಮಿಸಿದ್ದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಸ್ಥಳೀಯರಿಂದ ಸಮಸ್ಯೆ ಆಲಿಸಿದರು. ಐವರ ಸಾವಿಗೆ ಕಲುಷಿತ ನೀರು ಸೇವನೆಯೇ ಕಾರಣವಾ? ಅಥವಾ ಮತ್ತಿನ್ನೇನಾದ್ರೂ ಕಾರಣವಿದೆಯೇ? ಎನ್ನುವ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಿ ವರದಿ ಸಲ್ಲಿಸಲು ಜಿಲ್ಲಾಡಳಿತಕ್ಕೆ ಸೂಚಿಸಿದ್ದೇನೆ. FSL ಒಳಗೊಂಡು ಎಲ್ಲಾ ವರದಿ ಬಹಿರಂಗಪಡಿಸಲಾಗುವುದು. ಘಟನೆ ಮುಚ್ಚಿ ಹಾಕುವ ಪ್ರಶ್ನೆಯೇ ಇಲ್ಲ ಎಂದು ಪ್ರತಿಕ್ರಿಯಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ