ಬೆಂಗಳೂರನ್ನ ಸ್ಮಾರ್ಟ್ ಮಾಡೋಕೆ ಮುಂದಾಗಿರೋ ಪಾಲಿಕೆ, ಪ್ರಾಯೋಗಿಕವಾಗಿ ಕ್ಯೂ.ಆರ್.ಕೋಡ್ ಬಳಕೆಗೆ ಮುಂದಾಗಿದೆ. ನಮ್ಮ ಏರಿಯಾದಲ್ಲಿ ಕಸ ತೆಗೆದುಕೊಂಡಿಲ್ಲ, ಮರ ಬಿದ್ದಿದ್ರೂ ಯಾರೂ ಬಂದಿಲ್ಲ, ಮ್ಯಾನ್ ಹೋಲ್ ಬಾಯ್ದೆರೆದರೂ ಯಾರಿಗೆ ಫೋನ್ ಮಾಡಬೇಕು ಗೊತ್ತಾಗ್ತಿಲ್ಲ ಅನ್ನೋ ಜನರಿಗೆ ಕ್ಯೂ.ಆರ್.ಕೋಡ್ ಮೂಲಕ ಪರಿಹಾರ ನೀಡೋಕೆ ಪಾಲಿಕೆ ಮುಂದಾಗಿದೆ.
ಬೆಂಗಳೂರಿನ ದಕ್ಷಿಣ ವಲಯದ ವಿವಿಧ ಏರಿಯಾಗಳಲ್ಲಿ ಕ್ಯೂ.ಆರ್.ಕೋಡ್ ಟೆಕ್ನಿಕ್ ಪ್ರಾಯೋಗಿಕ ಪ್ರಯೋಗ ಮಾಡಲಾಗಿದೆ. ಏರಿಯಾದ ಬೋರ್ಡ್ ಗಳ ಮೇಲೆ ಕ್ಯೂ.ಆರ್ ಅಂಟಿಸಲಾಗಿದ್ದು,ಇದನ್ನ ಸ್ಕ್ಯಾನ್ ಮಾಡಿದ್ರೆ ಆ ಏರಿಯಾಗೆ ಸಂಬಂಧಿಸಿದ ಕಂಪ್ಲೀಟ್ ಡಿಟೇಲ್ ಜೊತೆಗೆ ಪಾಲಿಕೆ, ಜಲಮಂಡಳಿ,ಇಂಜಿನಿಯರ್ ಸೇರಿದಂತೆ ಹಲವರ ಮೊಬೈಲ್ ನಂಬರ್,ಮಾಹಿತಿ ಕೂಡ ಸಿಗಲಿದೆ.
ಸದ್ಯ ದಕ್ಷಿಣ ವಲಯದಲ್ಲಿ ಪ್ರಾಯೋಗಿಕವಾಗಿ ಕ್ಯೂ.ಆರ್.ಕೋಡ್ ಅಳವಡಿಸಿರೋ ಪಾಲಿಕೆ, ಮುಂದಿನ ದಿನಗಳಲ್ಲಿ ಇಡೀ ನಗರದಾದ್ಯಂತ ಈ ಟೆಕ್ನಾಲಜಿ ಬಳಕೆಗೆ ಪ್ಲಾನ್ ಮಾಡಿದೆ. ಸದ್ಯ ಸೌತ್ ಜೋನ್ ಗೆ 15 ಲಕ್ಷ ವೆಚ್ಚ ಅಂದಾಜಿಸಿದ್ದು, ಇಡೀ ನಗರದಲ್ಲಿ ಕ್ಯೂ.ಆರ್.ಕೋಡ್ ಅಳವಡಿಕೆಗೆ 1 ಕೋಟಿ ಖರ್ಚಾಗುವ ಸಾಧ್ಯತೆ ಇದೆ