ಫ್ಲೆಕ್ಸ್ ಬ್ಯಾನರ್ ತೆರವು ವಿಚಾರ
ನಗರದಲ್ಲಿ ಫ್ಲೆಕ್ಸ್ ಬ್ಯಾನರ್ ತೆರವು ವಿಚಾರವಾಗಿ ಬಿಬಿಎಂಪಿ ವಿಶೇಷ ಆಯುಕ್ತ ದೀಪಕ್ ಕುಮಾರ್ ಪ್ರತಿಕ್ರೀಯೆ ನೀಡಿದ್ದಾರೆ. ಈಗಾಗಲೆ ಚೀಫ್ ಎಂಜಿನಿಯರ್ ಹಾಗು ಜೆಸಿಗಳಿಗೆ ಬ್ಯಾನರ್ ಇರಬಾರದು ಅಂತ ಹೇಳಲಾಗಿದೆ ೨ ರಿಂದ ೩ ಬಾರಿ ಈ ಹಿಂದೆ ತಿಳಿಸಿದ್ದೇವೆ. ಬ್ಯಾನರ್ ಹಾಕಿರುವವರಿಗೆ ೧೦೦೦ ರೂಪಾಯಿ ದಂಡ ಹಾಕಲಾಗುತ್ತೆ ಮತ್ತು ಕಾನೂನು ಮೀರಿ ಬ್ಯಾನರ್ ಹಾಕಿದ್ರೆ ಬ್ಯಾನರ್ ತೆಗೆಯಲು ಬಿದ್ದ ಮೊತ್ತ ಕೂಡ ಅವರಿಂದಲೇ ಬರಿಸಬೇಕಾಗುತ್ತದೆ , ಇನ್ನು ಕಳೆದ ವಾರ ೧೬೦೦೦ ಬ್ಯಾನರ್ಗಳನ್ನು ತೆರವು ಮಾಡಲಾಗಿದೆ ಎಂದು ತಿಳಿಸಿದ್ದಾರೆ.