ಆನೆಯ ಮಾನವೀಯತೆ ಕಂಡು ನೆಟಿಜನ್ಸ್ ಫಿದಾ
ದಿನೇ ದಿನೇ ಕಾಡಿನಲ್ಲಿರುವ ಮೃಗಗಳು ಮಾನವೀಯತೆಯ ಗುಣಗಳನ್ನು ರೂಢಿಸಿಕೊಂಡಂತೆ. ನಾಡಿನಲ್ಲಿರುವ ಮಾನವನ ಮೃಗೀಯ ವರ್ತನೆಗಳು ಹೆಚ್ಚಾಗುತ್ತಿವೆ. ಆನೆಗಳಿಗೆ ಸಂಬಂಧಪಟ್ಟ ಸಾಕಷ್ಟು ವಿಡಿಯೋಗಳು ವೈರಲ್ ಆಗುತ್ತವೆ. ಕೆಲವೊಮ್ಮೆ ಖುಷಿ ನೀಡುವುದರ ಜೊತೆಗೆ ಮನುಕೂಲಕ್ಕೆ ಸಂದೇಶವನ್ನು ಸಾರುತ್ತವೆ. ಇದೂ ಕೂಡ ಅಂತಹದ್ದೇ ದೃಶ್ಯ. ಒಬ್ಬ ವ್ಯಕ್ತಿ ಹರಿಯುವ ನೀರಿನ ರಭಸಕ್ಕೆ ಕೊಚ್ಚಿ ಹೋಗುತ್ತಿರುವಂತೆ ಕಾಣುತ್ತಾನೆ. ಪಕ್ಕದಲ್ಲೇ ಆನೆಗಳ ಹಿಂಡು ನದಿ ದಾಟುತ್ತಿರುವ ದೃಶ್ಯದ ಮೂಲಕ ಈ ಕ್ಲಿಪ್ ಶುರುವಾಗುತ್ತದೆ. ನೋಡಿದ ತಕ್ಷಣ ಎಲ್ಲರನ್ನೂ ಸೆಳೆದು ಬಿಡುವಂತಹ ಅಪೂರ್ವ ದೃಶ್ಯ ಇದಾಗಿದೆ. ಈಜುತ್ತಿದ್ದ ವ್ಯಕ್ತಿಯನ್ನು ಕೊಚ್ಚಿ ಹೋಗುತ್ತಿದ್ದಾನೆ. ಅಪಾಯದಲ್ಲಿದ್ದಾನೆ ಎಂದು ಭಾವಿಸಿ ಒಂದು ಆನೆ ಅವನೆಡೆ ಸಹಾಯಕ್ಕೆ ಧಾವಿಸಿ ಅವನನ್ನು ಕಾಪಾಡಿ ದಡಕ್ಕೆ ಬಿಡುತ್ತದೆ. ಈ ದೃಶ್ಯ ನೆಟ್ಟಿಗರ ಮನ ಗೆದ್ದಿದ್ದು ಆನೆಯ ಮಾನವೀಯ ಗುಣಕ್ಕೆ ಎಲ್ಲರೂ ಮನಸೋತಿದ್ದಾರೆ.