ಪೀಣ್ಯ ಫ್ಲೈಓವೇರ್ ಕಳಪೆ ಕಾಮಗಾರಿ

ಗುರುವಾರ, 17 ಫೆಬ್ರವರಿ 2022 (18:26 IST)
ಪೀಣ್ಯ ಫ್ಲೈಓವರ್​​​ನಲ್ಲಿ ನಿನ್ನೆಯಿಂದ ಲಘು ವಾಹನಗಳ ಓಡಾಟಕ್ಕೆ ಮಾತ್ರ ಅವಕಾಶ ಮಾಡಿಕೊಡಲಾಗಿದೆ. ಆದ್ರೆ ಇದರ ಪೂರ್ತಿ ಪರೀಕ್ಷೆಗೆ 9 ತಿಂಗಳು ಬೇಕಾಗಿದೆ. ಭಾರತೀಯ ವಿಜ್ಞಾನ ಸಂಸ್ಥೆಯ ತಜ್ಞರು ಮೇಲ್ಸೇತುವೆ ಪರಿಶೀಲನೆ ಮಾಡಿದ್ದು, ವಿವಿಧ ಪರೀಕ್ಷೆಗಳನ್ನು ನಡೆಸಲು 6 ರಿಂದ 9 ತಿಂಗಳು ಬೇಕಾಗಿದೆ ಎಂದಿದ್ದಾರೆ.
ನಗರದಿಂದ ಹಲವು ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಪೀಣ್ಯ ಫ್ಲೈಓವರ್ ರಿಪೇರಿ ಕಾಮಗಾರಿ ಪೂರ್ಣಗೊಂಡಿದ್ದು, ಲಘುವಾಹನಗಳ ಸಂಚಾರಕ್ಕೆ ಫ್ಲೈಓವರ್ ಮುಕ್ತಾವಾಗಿದೆ. ಆದ್ರೆ ಕಳಪೆ ನಿರ್ಮಾಣ ಕಾಮಗಾರಿಗೆ ಸಾರ್ವಜನಿಕ ವಲಯದಲ್ಲಿ ಅಸಮಾಧಾನ ವ್ಯಕ್ತವಾಗಿದೆ.
 
ಪೀಣ್ಯ ಫ್ಲೈಓವರ್​​​ನಲ್ಲಿ ನಿನ್ನೆಯಿಂದ ಲಘು ವಾಹನಗಳ ಓಡಾಟಕ್ಕೆ ಮಾತ್ರ ಅವಕಾಶ ಮಾಡಿಕೊಡಲಾಗಿದೆ. ಇದರ ಪೂರ್ತಿ ಪರೀಕ್ಷೆಗೆ 9 ತಿಂಗಳು ಬೇಕಾಗಿದೆ. ಕಾರು,ಬೈಕ್‌, ಆಟೋ ಸಂಚಾರಕ್ಕಷ್ಟೇ ಅವಕಾಶ ಕಲ್ಪಿಸಲಾಗಿದೆ. ಭಾರತೀಯ ವಿಜ್ಞಾನ ಸಂಸ್ಥೆಯ ತಜ್ಞರು ಮೇಲ್ಸೇತುವೆ ಪರಿಶೀಲನೆ ಮಾಡಿದ್ದಾರೆ. ವಿವಿಧ ಪರೀಕ್ಷೆಗಳನ್ನು ನಡೆಸಲು 6 ರಿಂದ 9 ತಿಂಗಳು ಬೇಕಾಗಿದೆ. ಪರಿಶೀಲನೆ ನಂತರವಷ್ಟೇ ಭಾರಿ ವಾಹನಕ್ಕೆ ಅವಕಾಶ ಸಿಗಲಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ.
 
ಈ ಕುರಿತು ರಾಜ್ಯ ಸರ್ಕಾರಕ್ಕೆ ಐಐಎಸ್​ಸಿ ತಜ್ಞರು ರಿಪೋರ್ಟ್​ ನೀಡಿದ್ದಾರೆ. ನಿನ್ನೆ ಮಧ್ಯಾಹ್ನದಿಂದ ಲಘುವಾಹನ ಸಂಚಾರ ಪ್ರಾರಂಭವಾಗಿದೆ. ಮೇಲ್ಸೇತುವೆ ಹೆಚ್ಚು ಭಾರ ತಡೆದುಕೊಳ್ಳುತ್ತದೆಯೇ? ಬಾಗಿರುವ ಕೇಬಲ್‌ಗಳನ್ನು ಸ್ಥಳಾಂತರ ಮಾಡಬೇಕೇ? ಪಿಲ್ಲರ್‌ಗಳ ಸಮಸ್ಯೆ ಇಲ್ಲವೇ ಎಂಬ ಬಗ್ಗೆ ಪರಿಶೀಲಿಸುಲು ಭಾರತೀಯ ವಿಜ್ಞಾನ ಸಂಸ್ಥೆಯ ರಾಸಾಯನಿಕ ವಿಶ್ಲೇಷಣೆ, ನಿರ್ಮಾಣ ಮತ್ತು ವಿಫಲತೆ ತಂಡ ಪರೀಕ್ಷೆ ಮಾಡಬೇಕಾಗಿದೆ ಎಂದು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ