ಇದರ ಭಾಗವಾಗಿ ಬೆಂಗಳೂರು ಸೆಂಚುರಿಯನ್ ಕ್ಲಬ್‍ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸೆಕ್ಯೂರಿಟಿ ಗಾರ್ಡ್ ತಿಲಕವಿಟ್ಟು ಕರ್ತವ್ಯಕ್ಕೆ ಹಾಜರಾದ ಎಂಬ ಕಾರಣಕ್ಕೆ ಮೆಮೋ ನೀಡಿ, ಒಂದು ದಿನದ ಸಂಬಳ ಕಡಿತಗೊಳಿಸಿ ನೋಟಿಸ್ ಜಾರಿ ಮಾಡಿ ಹಿಂದುತ್ವ ವಿರೋ ಕೆಲಸ ಮಾಡಿದ್ದಾರೆ.
ಇದಕ್ಕೆ ಕಾರಣರಾದ ಕ್ಲಬ್ ಕಾರ್ಯದರ್ಶಿ ಈ.ಜಿ ಜೈದೀಪ್ ಅವರನ್ನು ಕೂಡಲೇ ವಜಾÁ ಮಾಡಬೇಕೆಂದು ರಾಜ್ಯ ಸಹಕಾರಿ ಸಚಿವರಲ್ಲಿ ಮನವಿ ಮಾಡುತ್ತಿದ್ದೇವೆ. ಈ ರೀತಿ ತಮ್ಮ ಸ್ವಾರ್ಥಕ್ಕೆ ಹಿಂದೂ ಧರ್ಮದ ಆಚಾರಕ್ಕೆ ಧಕ್ಕೆ ತರುವ ಸಂಸ್ಥೆಯ ವಿರುದ್ಧ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು ಇಲ್ಲವಾದಲ್ಲಿ ಹಿಂದೂ ಮಹಾಸಭಾ ಹಾಗೂ ಇತರೆ ಹಿಂದೂಪರ ಸಂಘಟನೆಗಳು ಈ ಸೆಂಚುರಿಯನ್ ಕ್ಲಬ್ ಮುಂದೆ ಮುಂದಿನ ದಿನಗಳಲ್ಲಿ ಪ್ರತಿಭಟನೆ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಇದೇ ತಿಂಗಳು 20ರಂದು ಅಖಿಲ ಭಾರತ ಹಿಂದೂ ಮಹಾಸಭಾದ ರಾಷ್ಟ್ರೀಯ ಅವೇಶನ ಕನ್ಯಾಕುಮಾರಿಯ ನಾಗರಕೋಯಿಲ್ ನಲ್ಲಿ ಜರುಗಲಿದೆ. ಸಭೆಯಲ್ಲಿ ದೇಶದ ಹಿಂದುತ್ವಕ್ಕೆ ಆಗುತ್ತಿರುವ ಅನ್ಯಾಯ ದೌರ್ಜನ್ಯಗಳ ವಿಚಾರವಾಗಿ ಚರ್ಚೆ ನಡೆಯಲಿದೆ. ಮುಂದಿನ ಹೋರಾಟಗಳ ಬಗ್ಗೆ ರೂಪುರೇಷೆಗಳು ತಯಾರಾಗಲಿವೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಮೋಹನ್‍ಗೌಡ, ದಿನಕರ್ ರಾವ್, ಕುಲಕರ್ಣಿ, ಮಮತಾ, ಸೂರ್ಯ ಉಪಸ್ಥಿತರಿದ್ದರು.