ಕಾರ್ಮಿಕರಿಗೆ ಆಹಾರ ಕಿಟ್ ನೀಡದೇ ಅಧಿಕಾರಿಗಳ ನಿರ್ಲಕ್ಷ್ಯ

ಬುಧವಾರ, 14 ಜುಲೈ 2021 (14:32 IST)
ಡಿಸಿಎಂ  ಕಾರಜೋಳ ಅವರ ಕ್ಷೇತ್ರವಾಗಿರುವ ಮುಧೋಳ ಪಟ್ಟಣದಲ್ಲಿ
ಸರ್ಕಾರ ದಿಂದ ಕಟ್ಟಡ ಕಾರ್ಮಿಕರಿಗೆ  ವಿತರಣೆ ಮಾಡುವ ಆಹಾರ  ಕಿಟ್ ವನ್ನು ಸರಿಯಾಗಿ ವಿತರಣೆ ಮಾಡುತ್ತಿಲ್ಲ ಎಂದು ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಬಾಗಲಕೋಟ ಜಿಲ್ಲೆಯ ಮುದೋಳ ಪಟ್ಟಣದಲ್ಲಿ ಜರುಗಿದೆ.ಕಳೆದ ನಾಲ್ಕು ದಿನಗಳಿಂದ ಕಿಟ್ ಪಡೆಯಲು ಕಟ್ಟಡ ಕಾರ್ಮಿಕರು ಗೋಡಾನ್ ಎದುರು ಸರದಿಯಾಗಿ ನಿಂತಿದ್ದಾರೆ.ಆದರೆ ಒಳಗಡೆ ಕಿಟ್ ಇದ್ದರೂ,ಅಧಿಕಾರಿಗಳು ಕಾರ್ಮಿಕರಿಗೆ ನೀಡುತ್ತಿಲ್ಲ.ಇದರಿಂದ ಬೇಸತ್ತು ಜನರು ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು, ಪ್ರತಿ ನಿತ್ಯ ದುಡಿದರೆ ಮಾತ್ರ ಒಪ್ಪತ್ತಿನ ಊಟ ಸಿಗುತ್ತದೆ.ಆದರೆ ಕಳೆದ ನಾಲ್ಕು ದಿನಗಳಿಂದ ಕಿಟ್ ವಿತರಣೆ ಮಾಡದೆ ಸತಾಯಿಸುತ್ತಿದ್ದಾರೆ.ಈ ಸಂಭಂದ ಕಾರ್ಮಿಕರು ಗಲಾಟೆ ಮಾಡುತ್ತಿರುವಾಗ ಸ್ಥಳೀಯ ರೈತ ಮುಖಂಡರು ಹೋಗಿ ಸಮಾಧಾನ ಪಡಿಸಿದ್ದಾರೆ.ನಂತರ ಅಧಿಕಾರಿಗಳಿಗೆ ಕರೆದು ಕಿಟ್ ವಿತರಣೆ ಮಾಡಿಸಿದ್ದಾರೆ.ಕಾರ್ಮಿಕರ ಇಲಾಖೆ ವತಿಯುಂದ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಕಳೆದ ಎಂಟು ದಿನಗಳ ಹಿಂದೆ ಸಾಂಕೇತಿಕ ವಾಗಿ ವಿತರಣೆ ಮಾಡಿ ಎಲ್ಲರಿಗೂ ಮುಟ್ಟಿಸುವಂತೆ ಸೂಚನೆ ನೀಡಿದ್ದರು. ಆದರೆ ಇದುವರೆಗೂ ಕಿಟ್ ವಿತರಣೆ ಮಾಡದೆ ಹಿನ್ನಲೆ ಆಕ್ರೋಶ ವ್ಯಕ್ತವಾಗಿತ್ತು.ಮುಧೋಳ ತಾಲೂಕಿನ ಎಲ್ಲಾ ಕಟ್ಟಡ ಕಾರ್ಮಿಕರಿಗೆ ಸರಿಯಾದ ಸಮಯಕ್ಕೆಮುಟ್ಟಿಸಬೇಕಾಗಿದೆ.
ಇಲ್ಲವಾದಲ್ಲಿ ಒಳಗಡೆ ಇದ್ದ ಆಹಾರ ಸಾಮಗ್ರಿಗಳುಹಾಳಾಗುತ್ತದೆ.ಆದ್ರೆ ಅಧಿಕಾರಿಗಳು ನಿರ್ಲಕ್ಷ್ಯ ಮಾಡದೆ,ಫಲಾನುಭವಿಗಳಿಗೆ ಕಿಟ್ ವಿತರಣೆ ಮಾಡಬೇಕು ಎಂದು ಸ್ಥಳೀಯ ರೈತ ಯುವ ಮುಖಂಡ ಯಲ್ಲಪ್ಪ ಹೆಗಡೆ ತಿಳಿಸಿದ್ದಾರೆ..

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ