ಶರವತಿ ಸಂತ್ರಸ್ತರ ಸಮಸ್ಯೆ ಬಗೆಹಾರಿಸುವುದಾಗಿ ಮಾಜಿ ಸಿಎಂ ಬಿಎಸ್ ವೈ ಭರವಸೆ

ಗುರುವಾರ, 2 ಫೆಬ್ರವರಿ 2023 (15:45 IST)
ಶರಾವತಿ ಮೂಲ ಸಂತ್ರಸ್ತರ ಸಮಸ್ಯೆ ಕುರಿತು ಮಾಜಿ ಸಿಎಂ ಯಡಿಯೂರಪ್ಪ ವಿಕಾಸಸೌಧದಲ್ಲಿ ಸಭೆ ನಡರಸಿದ್ದಾರೆ.ಶರಾವತಿ ಭಾಗದ ಸಂತ್ರಸ್ತರ ಬಗ್ಗೆ  ಸಭೆಯಲ್ಲಿ ಮಾಹಿತಿ ಮಾಜಿ ಸಿಎಂ ಬಿಎಸ್ ವೈ ಮಾಹಿತಿ ಪಡೆದಿದ್ದಾರೆ.ಶರಾವತಿ ಮೂಲ ಸಂತ್ರಸ್ತರಿಗೆ ಪರಿಹಾರ ನೀಡುವ ಬಗ್ಗೆ ಸಭೆಯಲ್ಲಿ ಚರ್ಚೆ ಕೂಡ ನಡೆದಿದೆ.ಸಭೆಯಲ್ಲಿ ಗೃಹ ಸಚಿವ  ಆರಗ ಜ್ಞಾನೇಂದ್ರ, ಲೊಕಸಭಾ ಸದಸ್ಯ ರಾಘವೇಂದ್ರ ಬಿ ವೈ, ಶಾಸಕರುಗಳಾದ ಹರತಾಳು ಹಾಲಪ್ಪ, ಅಶೋಕ್ ನಾಯಕ್ ಸೇರಿದಂತೆ ಹಿರಿಯ ಅಧಿಕಾರಿಗಳು ಭಾಗವಹಿಸಿದರು,
 
ಇನ್ನೂ ಈ ವೇಳೆ ಮಾತನಾಡಿದ ಮಾಜಿ ಸಿಎಂ ಯಡಿಯೂರಪ್ಪ ಶರಾವತಿ ಸಂತ್ರಸ್ತರಿಗೆ ತಾವು ಉಳುಮೆ ಮಾಡುವ ಜಮೀನು ಹಕ್ಕು ನೀಡುವುದು 60 ವರ್ಷದ ಸಮಸ್ಯೆ ಆಗಿ ಉಳಿದಿದೆ.ಗೃಹಸಚಿವ ಆರಗ ಜ್ಞಾನೇಂದ್ರ, ಸಂಸತ್ ಸದಸ್ಯ ರಾಘವೇಂದ್ರ, ಹಾಲಪ್ಪ ಎಲ್ಲರೂ ಶ್ರಮ ವಹಿಸಿದ್ದಾರೆ.ಕೇಂದ್ರ ಸಚಿವ ಭೂಪೇಂದ್ರ ಯಾದವ್ ಭೇಟಿ ಮಾಡಿದ್ದೆವು.ಸಮಸ್ಯೆ ಬಗೆಹರಿಸೋದಾಗಿ ಸ್ಪಷ್ಟವಾಗಿ ಹೇಳಿದ್ದಾರೆ.ಶರಾವತಿ ಜಮೀನು ಕಳೆದುಕೊಂಡು ಸ್ವಂತ ಜಮೀನು ಇಲ್ಲದೆ ಸಮಸ್ಯೆ ಆಗಿತ್ತು.9 ಸಾವಿರ ಎಕರೆ ಜಮೀನು ಹಕ್ಕಿಗೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲು ನಿರ್ಧಾರ ಮಾಡಿದ್ದೇವೆ.ಕೇಂದ್ರಕ್ಕೆ ಹಿಂದೆ ಮಾಡಿದ್ದ ಪರಿಶೀಲನೆ ಮಾಡಲು ಮನವಿ ಮಾಡಿದೇವೆ.ಪ್ರಪೋಸಲ್ ಇಂದು ಕಳಿಸುತ್ತಿದ್ದೇವೆ.ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡ್ತೀವಿ ಸುಮಾರು 12 ಸಾವಿರ ಕುಟುಂಬ ಇದೆ ಎಂದು ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ