ಮದ್ವೆಯಾದ ಮರುದಿನವೇ ಹೊಸ ಜೋಡಿ ಮೇಲೆ ಹಲ್ಲೆ ಮಾಡಿದ ಮಾಜಿ ಲವರ್

ಶುಕ್ರವಾರ, 13 ಡಿಸೆಂಬರ್ 2019 (16:14 IST)
ಹುಡುಗಿಯ ಮಾಜಿ ಲವರ್ ನೊಬ್ಬ ಪ್ರೇಯಸಿ ಮದುವೆಯಾದ ಮರುದಿನವೇ ಚಾಕುವಿನಿಂದ ಇರಿದು ಗಂಭೀರವಾಗಿ ಗಾಯಗೊಳಿಸಿದ್ದಾನೆ.

19 ವರ್ಷದ ಹುಡುಗನೊಬ್ಬ ತನ್ನ ಮಾಜಿ ಪ್ರೇಯಸಿ ಮದುವೆಯಾದ ಮರುದಿನವೇ ಆಕೆಯ ಮೇಲೆ ಚಾಕುವಿನಿಂದ ತಿವಿದು ಹಲ್ಲೆ ನಡೆಸಿದ್ದಾನೆ. ಇದನ್ನು ಬಿಡಿಸೋಕೆ ಬಂದ ಆಕೆಯ ಗಂಡನ ಮೇಲೂ ದಾಳಿ ನಡೆಸಿದ್ದಾನೆ.

ಇದೀಗ ಪ್ರಾಣಾಪಾಯದಿಂದ ಪಾರಾಗಿರೋ ನೂತನ ಜೋಡಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಮದುವೆಗೂ ಮುಂಚೆ ಲವ್ ಮಾಡ್ತಿದ್ವಿ. ಆದರೆ ಮನೆಯವರು ಬೇರೆ ಹುಡುಗನೊಂದಿಗೆ ಮದುವೆ ಮಾಡಿದ್ದಾರೆ. ಹೀಗಾಗಿ ಲವರ್ ಹಲ್ಲೆ ನಡೆಸಿದ್ದಾನೆ ಅಂತ ನೂತನ ವಧು ಕೇಸ್ ದಾಖಲು ಮಾಡಿದ್ದಾಳೆ.

ಮಹಾರಾಷ್ಟ್ರದ ಥಾಣೆಯಲ್ಲಿ ಈ ಘಟನೆ ನಡೆದಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ