ಸಿದ್ದಗಂಗಾ ಆಸ್ಪತ್ರೆಗೆ ಮಾಜಿ ಸಚಿವ ವಿ. ಸೋಮಣ್ಣ ಭೇಟಿ

ಮಂಗಳವಾರ, 15 ಜನವರಿ 2019 (17:08 IST)
ಸಿದ್ದಗಂಗಾ ಆಸ್ಪತ್ರೆಗೆ ಮಾಜಿ ಸಚಿವ ವಿ. ಸೋಮಣ್ಣ ಭೇಟಿ ನೀಡಿದರು. ಆಸ್ಪತ್ರೆಗೆ ಭೇಟಿ ನೀಡಿದ ಸೋಮಣ್ಣ, ಶ್ರೀಗಳ ಆರೋಗ್ಯ ವಿಚಾರಿಸಿದರು.

ಸಿದ್ದಗಂಗಾ ಶ್ರೀ ಆರೋಗ್ಯ ವಿಚಾರಣೆ ಬಳಿಕ ಮಾಜಿ ಸಚಿವ ಸೋಮಣ್ಣ ಹೇಳಿಕೆ ನೀಡಿದ್ದು, ಶ್ರೀಗಳನ್ನ ಸಿದ್ಧಗಂಗಾ ಮಠಕ್ಕೆ ಶಿಫ್ಟ್ ಮಾಡುವ ಬಗ್ಗೆ ಚಚೆ೯ ನಡೆಯುತ್ತಿದೆ. ಈ ಬಗ್ಗೆ ಕಿರಿಯ ಶ್ರೀಗಳು ಹಾಗೂ ವೈದ್ಯ ರ ಜೊತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಮಾಹಿತಿ ಪಡೆದಿದ್ದಾರೆ.

ಶ್ರೀಗಳ ತೀರ್ಮಾನಕ್ಕೆ ನಾವೆಲ್ಲಾ ಬದ್ಧರಾಗಿದ್ದೇವೆ ಎಂದ ಅವರು, ಶ್ರೀಗಳ ಬಗ್ಗೆ ವದಂತಿಗಳನ್ನ ಹಬ್ಬಿಸುವುದು ಸರಿ ಅಲ್ಲಾ. ಸ್ವಾಮೀಜಿ ಅವರು ಆರೋಗ್ಯವಾಗಿದ್ದಾರೆ. ಕೈ ಕಾಲು ಆಡಿಸ್ತಾ ಇದ್ದಾರೆ ಎಂದು ಹೇಳಿದರು.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ