ಮಾಜಿ ಸ್ಪೀಕರ್ ಕಾಲಿಗೆ ಬಿದ್ದ ಅನರ್ಹ ಶಾಸಕ - ಬಿಗ್ ಬ್ರೇಕಿಂಗ್

ಶನಿವಾರ, 16 ನವೆಂಬರ್ 2019 (14:14 IST)
ಅನರ್ಹಗೊಂಡಿರೋ ಶಾಸಕರೊಬ್ಬರು ಮಾಜಿ ಸ್ಪೀಕರ್ ಕಾಲಿಗೆ ಬಿದ್ದು ನಮಸ್ಕಾರ ಮಾಡುವುದರೊಂದಿಗೆ ಹೊಸ ಚರ್ಚೆಗೆ ಕಾರಣವಾಗಿದ್ದಾರೆ.

ಮೈಸೂರಿನಲ್ಲಿ ಮಾಜಿ ಸ್ಪೀಕರ್, ಮಂಡ್ಯದ ಗಾಂಧಿ ಖ್ಯಾತಿಯ ಕೃಷ್ಣ ಅವರನ್ನು ಅನರ್ಹ ಶಾಸಕ ಡಾ. ನಾರಾಯಣಗೌಡ ಭೇಟಿ ಮಾಡಿದ್ರು. ಕೃಷ್ಣ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದುಕೊಂಡರು ನಾರಾಯಣಗೌಡ.

ಮಂಡ್ಯ ಕೃಷ್ಣರಾಜಪೇಟೆ  ಹಿರಿಯ ರಾಜಕೀಯ ಮುತ್ಸದ್ಧಿಗಳಾದ ಮಾಜಿ ಸ್ಪೀಕರ್ ಕೃಷ್ಣ ಅವರ ಮೈಸೂರು ನಿವಾಸಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದುಕೊಂಡಿದ್ದಾರೆ ಬಿಜೆಪಿ ಅಭ್ಯರ್ಥಿಯಾಗಿರೋ ಅನರ್ಹ ಶಾಸಕ ಡಾ.ನಾರಾಯಣಗೌಡ.

ಅನರ್ಹ ಶಾಸಕ ನಾರಾಯಣಗೌಡ ಅವರಿಗೆ ಮಾಜಿ ಸ್ಪೀಕರ್ ಕೃಷ್ಣ ಅವರ ಕಟ್ಟಾಬೆಂಬಲಿಗ ತಾಲೂಕು ಪಂಚಾಯಿತಿ ಮಾಜಿಸದಸ್ಯ ಬಿ.ಜವರಾಯಿಗೌಡ ಸಾಥ್ ನೀಡಿದ್ರು.

ಚುನಾವಣೆಯಲ್ಲಿ ಗೆದ್ದು ಬಂದು ತಾಲೂಕನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸುವಂತೆ ಹರಸಿ ಆಶೀರ್ವದಿಸಿದ್ದಾರೆ ಹಿರಿಯ ಗಾಂಧಿವಾದಿಗಳಾದ ಕೃಷ್ಣ.

ಕೃಷ್ಣರಾಜಪೇಟೆ  ಮೂರು ಅವಧಿಗೆ ಶಾಸಕರಾಗಿ, ಸಂಸದರಾಗಿ, ರೇಷ್ಮೆ ಮತ್ತು ಪಶುಸಂಗೋಪನೆ 
ಖಾತೆಯ ಸಚಿವರಾಗಿ ಮುಖ್ಯಮಂತ್ರಿ ಎಸ್.ಆರ್.ಬೊಮ್ಮಾಯಿ ಅವರ ಸಂಪುಟದಲ್ಲಿ ಕೆಲಸ ಮಾಡಿರುವ ಕೃಷ್ಣ, ಸರಳ ಸಜ್ಜನ ವ್ಯಕ್ತಿತ್ವವನ್ನು ಅಳವಡಿಸಿಕೊಂಡಿದ್ದು ಇಂದಿಗೂ ತಾಲೂಕಿನಲ್ಲಿ ತಮ್ಮದೇ ಆದ ಅಭಿಮಾನಿಗಳ ಪಡೆಯನ್ನು ಹೊಂದಿದ್ದಾರೆ.

ಮೈಸೂರಿನ ಕುವೆಂಪು ನಗರದಲ್ಲಿರುವ ಮಾಜಿಸ್ಪೀಕರ್ ಕೃಷ್ಣ ಅವರ ಮನೆಗೆ ಭೇಟಿ ನೀಡಿದ್ದ ಅನರ್ಹ ಶಾಸಕ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಾ ಕಣದಲ್ಲಿರುವ ನಾರಾಯಣಗೌಡ ಕೃಷ್ಣ ಅವರಿಗೆ ಶಾಲು ಹೊದಿಸಿ, ಏಲಕ್ಕಿ ಹಾರವನ್ನು ಹಾಕಿ ಗೌರವಿಸಿ ಕಾಲಿಗೆ ಬಿದ್ದು ನಮಸ್ಕರಿಸಿ ಆಶೀರ್ವಾದ ಪಡೆದುಕೊಂಡರು.

ಅನರ್ಹಶಾಸಕ ನಾರಾಯಣಗೌಡ ಅವರು ಕೃಷ್ಣ ಅವರ ಆಶೀರ್ವಾದ ಪಡೆದುಕೊಂಡಿರುವುದು ಕೆ.ಆರ್.ಪೇಟೆ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ