ಬೆಂಗಳೂರು : ಅನ್ನದಾತರಿಗೆ ಸಾಲಮನ್ನಾ ಆಸೆ ತೋರಿಸಿ ರಾಜ್ಯ ಸರ್ಕಾರದಿಂದ ಮೋಸ ಮಾಡಿದೆ ಎಂಬ ಆರೋಪ ಕೇಳಿಬಂದಿದೆ.
ಲೋಕಸಭಾ ಚುನಾವಣೆಯ ವೇಳೆ ರಾಜ್ಯ ಸರ್ಕಾರದಿಂದ ರೈತರ ಖಾತೆಗೆ ಸಾಲಮನ್ನಾ ಹಣ ಹಾಕಲಾಗಿತ್ತು. ಆದರೆ ಚುನಾವಣೆಯ ಫಲಿತಾಂಶದ ಬಳಿಕ ಸರ್ಕಾರ ರೈತರ ಖಾತೆಗೆ ಹಾಕಿದ ಹಣ ವಾಪಾಸ್ ಪಡೆದಿದೆ ಎಂದು ರೈತರೊಬ್ಬರು ಆರೋಪ ಮಾಡಿದ್ದಾರೆ.
ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ರೈತರ ಖಾತೆಗೆ ಹಾಕಲಾದ ಸಾಲಮನ್ನಾ ಹಣ ಮಾಯವಾಗಿದೆ. ಇದರಿಂದ ಯಾದಗಿರಿ ರೈತರಿಗೆ ಸಾಲಮನ್ನಾ ಯೋಜನೆಯಲ್ಲಿ ಅನ್ಯಾಯವಾಗಿದೆ ಎಂದು ಹೇಳಲಾಗಿದೆ. ಈ ಘಟನೆಯನ್ನು ಗಮನಿಸಿದರೆ ರಾಜ್ಯ ಸರ್ಕಾರದ ಸಾಲಮನ್ನಾಯೋಜನೆ ಹೆಸರಿಗಷ್ಟೇ ಸೀಮತವಾಗಿದೆ ಎನ್ನಲಾಗುತ್ತಿದೆ.