ಫ್ರೀ ಕಾಶ್ಮೀರ ಪೋಸ್ಟರ್ ಪ್ರದರ್ಶನ ಪ್ರಕರಣ; ಪೊಲೀಸರ ಮುಂದೆ ಭಿತ್ತಿಪತ್ರದ ಸತ್ಯ ಬಿಚ್ಚಿಟ್ಟ ಆರ್ದ್ರಾ

ಶನಿವಾರ, 22 ಫೆಬ್ರವರಿ 2020 (11:48 IST)
ಬೆಂಗಳೂರು : ಪಾಕ್ ಪರ ಘೋಷಣೆ , ಫ್ರೀ ಕಾಶ್ಮೀರ ಪೋಸ್ಟರ್ ಪ್ರದರ್ಶನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ಮುಂದೆ ಭಿತ್ತಿಪತ್ರದ ಸತ್ಯವನ್ನು ಆರೋಪಿ ಆರ್ದ್ರಾ ಬಾಯ್ಬಿಟ್ಟಿದ್ದಾಳೆ.


ಆರೋಪಿ  ಆರ್ದ್ರಾ ಳನ್ನು ಪೊಲೀಸರು ವಿಚಾರಣೆ ನಡೆಸಿದಾಗ, ಪಿಜಿಯಲ್ಲಿ  ಭಿತ್ತಿಪತ್ರ ತಯಾರು ಮಾಡಿದ್ದು, ಅಲ್ಲಿದ್ದ ಖಾಲಿ ಬಾಕ್ಸ್ ಗಳನ್ನು ಬಳಸಿ ಭಿತ್ತಿಪತ್ರವನ್ನು ತಯಾರು ಮಾಡಿದ್ದಾಳೆ. ಹಾಗೇ ಪಿಜಿ ಬಳಿಯ ಅಂಗಡಿಯೊಂದರಲ್ಲಿ ಬಣ್ಣ ತಂದು ಬರೆದಿದ್ದಳು ಎಂದು ಹೇಳಿದ್ದಾಳೆ.

 

ಅಲ್ಲದೇ  370, ಸಿಎಎ, ಎನ್ ಆರ್ ಸಿ ಪ್ರತಿಭಟನೆಯಿಂದ ಪ್ರೇರೆಪಣೆಗೊಂಡು  ಭಿತ್ತಿಪತ್ರ ಹಿಡಿದು ಫ್ರೀಡಂ ಪಾರ್ಕ್ ಗೆ ಪ್ರತಿಭಟನೆ ಮಾಡಲು ಬಂದಿದ್ದಾಗ ಅಲ್ಲಿ ಅಮೂಲ್ಯ ಪಾಕ್ ಪರ ಘೋಣೆ ಕೂಗಿದ್ದನ್ನ ಕಣ್ಣಾರೆ ನೋಡಿ ಪಿಜಿಗೆ ತೆರಳಿದ್ದಾಗಿ ಆಕೆ ತಿಳಿಸಿದ್ದಾಳೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ