ಬೆಂಗಳೂರಿನಲ್ಲಿ ಭಾರಿ ಪ್ರಮಾಣದ ಮಾದಕ ವಸ್ತು ಜಪ್ತಿ

ಶನಿವಾರ, 22 ಫೆಬ್ರವರಿ 2020 (11:25 IST)
ಬೆಂಗಳೂರು : ಬೆಂಗಳೂರಿನಲ್ಲಿ ಭಾರಿ ಪ್ರಮಾಣದ ಮಾದಕ ವಸ್ತು ಜಪ್ತಿ ಮಾಡಲಾಗಿದ್ದು, ಕಸ್ಟಮ್ಸ್ ಅಧಿಕಾರಿಗಳಿಂದ ಎಫಿಡ್ರಿನ್ ಮಾದಕ ವಸ್ತು ವಶಕ್ಕೆ ಪಡೆಯಲಾಗಿದೆ.


ಕೆಐಎಎಲ್ ನಲ್ಲಿ 5,049ಕೆಜಿ ಎಫಿಡ್ರಿನ್ ಮಾದಕ ವಸ್ತು ಜಪ್ತಿ ಮಾಡಲಾಗಿದ್ದು, ಇದು  5.05 ಕೋಟಿ ರೂಪಾಯಿ ಮೌಲ್ಯದ ಮಾದಕ ವಸ್ತು ಎನ್ನಲಾಗಿದೆ. ಮದುವೆ ಆಮಂತ್ರಣ ಪತ್ರಿಕೆಗಳಲ್ಲಿ ಮಾದಕ ವಸ್ತು ಸಾಗಣೆ ಮಾಡಲಾಗುತ್ತಿದ್ದು, ಚೆನ್ನೈ ಮೂಲದ ವ್ಯಕ್ತಿಯಿಂದ ಮಧುರೈನಿಂದ ಆಸ್ಟ್ರೇಲಿಯಾಗೆ ಸಾಗಣೆಗೆ ಯತ್ನಿಸಲಾಗಿದೆ.


ಕೆಐಎಎಲ್ ಕೊರಿಯರ್ ಟರ್ಮಿನಲ್ ನಲ್ಲಿ ತಪಾಸಣೆ ವೇಳೆ 43ಮದುವೆ ಆಮಂತ್ರಣ ಪತ್ರಿಕೆ ಲಭ್ಯವಾಗಿದ್ದು, ಅನುಮಾನ ಬಂದು ಪರಿಶೀಲಿಸಿದಾಗ ಬಿಳಿ ಪೌಡರ್ ಪತ್ತೆಯಾಗಿದೆ. ಬಿಳಿ ಪೌಡರ್ ಪರೀಕ್ಷಿಸಿದಾಗ ಮಾದಕ ವಸ್ತು ಎಂಬುದು ತಿಳಿದುಬಂದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ