ನಾಲ್ಕೂ ನಿಗಮಗಳಲ್ಲೂ ಅಂಧರಿಗೆ ಉಚಿತವಾಗಿ ಓಡಾಡಲು ಅವಕಾಶ: ರಾಜ್ಯ ಸರ್ಕಾರದ ಮಹತ್ವದ ನಿರ್ಧಾರ

Sampriya

ಭಾನುವಾರ, 13 ಜುಲೈ 2025 (14:36 IST)
Photo Credit X
ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಶಕ್ತಿ ಯೋಜನೆಯನ್ನು ಅಂಧ ಪ್ರಯಾಣಿಕರಿಗೂ ರಾಜ್ಯ ಸರ್ಕಾರ ವಿಸ್ತರಿಸಿದೆ. ನಾಲ್ಕು ನಿಗಮಗಳಲ್ಲೂ ಉಚಿತ ಪ್ರಯಾಣಕ್ಕೆ ಅವಕಾಶ ನೀಡಲಾಗಿದ್ದು, ಇದರಿಂದ ಲಕ್ಷಾಂತರ ಅಂಧರಿಗೆ ಪ್ರಯೋಜನವಾಗಲಿದೆ.

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ನೀಡಿದ್ದ ಸರ್ಕಾರ ಈಗ ಅಂಧತ್ವ ಹೊಂದಿರೋ ವಿಶೇಷ ಚೇತನರಿಗಾಗಿ ಗುಡ್ ನ್ಯೂಸ್ ನೀಡಿದೆ. ರಾಜ್ಯ ಸಾರಿಗೆಯ 4 ನಿಗಮಗಳಲ್ಲಿ ಉಚಿತವಾಗಿ ಓಡಾಡಲು ಅವಕಾಶ ಕಲ್ಪಿಸಿದೆ.

ನಾಲ್ಕು ನಿಗಮಗಳ ಪೈಕಿ ಯಾವ ನಿಗಮದ ಬಸ್‌ಪಾಸ್ ಇತ್ತೋ ಆ ಬಸ್‌ನಲ್ಲಿ ಮಾತ್ರ ಅಂಧತ್ವ ಇದ್ದವರು ಓಡಾಡಲು ಅವಕಾಶ ಇತ್ತು. ಇದು ಅನೇಕರಿಗೆ ಸಮಸ್ಯೆ ಕೂಡ ಆಗುತ್ತಿತ್ತು. ಅದರಲ್ಲೂ ಬೆಂಗಳೂರಿನಲ್ಲಿರೋ ಹಲವರು ಬಿಎಂಟಿಸಿ ಬಸ್‌ನಲ್ಲಿ ಓಡಾಡಲು ಅವಕಾಶ ಇದ್ದವರು ಕೆಎಸ್‌ಆರ್‌ಟಿಸಿಯಲ್ಲಿ ಓಡಾಡಬೇಕಾದ್ರೆ ಹಣ ಪಾವತಿ ಮಾಡಿಯೇ ಓಡಾಡಬೇಕಿತ್ತು. 

ಈಗ ಅಂಧರ ಅನೂಕೂಲಕ್ಕಾಗಿ ಸರ್ಕಾರ ಹೊಸ ಆದೇಶ ಮಾಡಿದೆ. ಆ ಪ್ರಕಾರ ಯಾವುದಾದರೂ 1 ನಿಗಮದ ಪಾಸ್ ಇದ್ದರೆ, 4 ನಿಗಮಗಳ ಬಸ್‌ಗಳಲ್ಲಿ ಉಚಿತವಾಗಿ ಸಂಚಾರ ಮಾಡಬಹುದು. ಸದ್ಯ ಈ ಬಗ್ಗೆ ಖುದ್ದು ಸಾರಿಗೆ ಸಚಿವರೇ ನಿಗಮಗಳಿಗೆ ಸೂಚಿಸಿದ್ದಾರೆ.  

ಬೆಂಗಳೂರು ನಗರ ಒಂದರಲ್ಲೇ ಸುಮಾರು 20 ಸಾವಿರಕ್ಕೂ ಹೆಚ್ಚು ಅಂಧರಿದ್ದಾರೆ. ರಾಜ್ಯವ್ಯಾಪಿ ಲಕ್ಷದಷ್ಟು ಅಂಧ ವಿಶೇಷ ಚೇತನರಿದ್ದು, ಎಲ್ಲರಿಗೂ ಸರ್ಕಾರ ಉಚಿತ ಪಾಸ್ ನೀಡುತ್ತಿದೆ.  

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ