ಉಚಿತ ಯೋಜನೆಗೆ ಸುಪ್ರೀಂ ಕೋರ್ಟ್ ನೋಟೀಸ್ ವಿಚಾರವಾಗಿ ಕೇಂದ್ರ ಮಾಜಿ ಸಚಿವ ಸದಾನಂದಗೌಡ ಪ್ರತಿಕ್ರಿಯಿಸಿದ್ದಾರೆ.ಇದರ ಬಗ್ಗೆ ನನಗೆ ಹೆಚ್ಚು ಮಾಹಿತಿ ಇಲ್ಲ.ರಾಜ್ಯದ ಅರ್ಥ ವ್ಯವಸ್ಥೆ ಮೇಲೆ ಮಾರಕವಾಗಲಿದೆ.ಉಚಿತ ಯೋಜನೆ ಮೂಲಕ ಆರ್ಥಿಕತೆ ಮೇಲೆ ಪರಿಣಾಮ ಬೀರಲಿದೆ.ಉಚಿತ ಯೋಜನೆ ಆರ್ಥಿಕತೆ ಮೇಲೆ ಪರಿಣಾಮ ಬೀರಲಿದೆ.ಮತದಾರರ ಮೇಲೆ ಪ್ರಭಾವ ಬೀರುವ ಕಾರ್ಯ ಇದರಿಂದ ಪರೋಕ್ಷವಾಗಿ ನಡೆಯುತ್ತದೆ.ಪ್ರಜಾತಂತ್ರ ಮೌಲ್ಯ ಕುಸಿಯುತ್ತುವೆ.ಜನರಿಗೆ ಬೇಕಿರೋ ಅವಶ್ಯಕತೆ ನೀಡಬೇಕಿದೆ.ಕೋರ್ಟಿನಲ್ಲಿ ಕೇಸ್ ಪೆಂಡಿಂಗ್ ಇದೆ ಹೀಗಾಗಿ ಈ ಬಗ್ಗೆ ಹೆಚ್ಚೇನು ಮಾತನಾಡುವಂತಿಲ್ಲ ಎಂದು ಸದಾನಂದಗೌಡ ಹೇಳಿದ್ದಾರೆ.
ರಾಹುಲ್ ಗಾಂಧಿಯನ್ನ ರಾವಣನಿಗೆ ಹೋಲಿಸಿದ್ದಕ್ಕೆ, ಬಿಜೆಪಿಯಲ್ಲಿ ಕೀಚಕ ಮತ್ತಿತರಿದ್ದಾರೆ ಅಂತ ದಿನೇಶ್ ಗುಂಡೂರಾವ್ ಟ್ವೀಟ್ ವಿಚಾರವಾಗಿ ಇದು ವೈಯಕ್ತಿಕ ಆರೋಪ, ದೋಷಾರೋಪಗಳು ರಾಜಕಾರಣದಲ್ಲಿ ಹೆಚ್ಚುತ್ತಿದೆ.ವ್ಯಕ್ತಿಯ ಚಾರಿತ್ರ ಹರಣದ ಮೂಲಕವೇ ರಾಜಕಾರಣ ಬೆಳೆಸ್ತೇವೆ ಅನ್ನೋ ಪ್ರವೃತ್ತಿ ಹೆಚ್ಚಾಗಿದೆ.ರಾಜಕಾರಣದಲ್ಲಿ ಒಂದು ರೀತ ಸಾಮಾಜಿಕ ವ್ಯವಸ್ಥೆ ಅಥಪತನ ಆಗಲಿದೆ.ಆಡಳಿತ ನಡೆಸುವವರ ವಿರುದ್ಧ ಜವಾಬ್ದಾರಿ ಇರೋರ ಜೊತೆಯಲ್ಲಿ ಟೀಕೆ ಟಿಪ್ಪಣಿ ಸರಿ.ಆದ್ರೆ, ಅದಕ್ಕೂ ಇತಿ ಮಿತಿ ಇದೆ.ಇತಿ ಮಿತಿ ಮೀರಿ ಬೆಳೆಯುತ್ತಿರುವ ವಿಚಾರ, ಇದು ಭವಿಷ್ಯದಲ್ಲಿ ಯುವಜನಾಂಗದ ಮೇಲೆ ಖಂಡಿತ ದುಷ್ಪಪರಿಣಾಮ ಬೀರಲಿದೆ.ನಾವು ಹೇಳಿಕೆ ಕೊಟ್ಟ ಕೂಡಲೇ ಬ್ರೇಕಿಂಗ್ ನ್ಯೂಸ್ ಆಗಲಿದೆ ಅಂತ ಬಾವಿಸಿದ್ದಾರೆ.ಅದಕ್ಕಾಗಿಯೇ ಕೆಲವರಿದ್ದಾರೆ.ನಮ್ಮ ಹೇಳಿಕೆಯೇ ಭವಿಷ್ಯ ನಿರ್ಧಾರ ಆಗಲಿದೆ ಅಂದುಕೊಂಡಿದ್ದಾರೆ.ಎಲ್ಲಾ ಪಕ್ಷಗಳಲ್ಲಿ ಇಂತವರಿದ್ದಾರೆ, ನಮ್ಮ ಪಕ್ಷ ಹೊರತು ಅಂತ ಹೇಳಲ್ಲ.ಎಲ್ಲರಿಗೂ ವಿನಂತಿ ಮಾಡ್ತೀನಿ.ಸಾಮಾಜಿಕ ಜೀವನದಲ್ಲಿ ವ್ಯಕ್ತಿಯ ಚಾರಿತ್ರ ಹರಣ ಮಾಡುವ ಕೆಲಸ ಮಾಡಬಾರದು.ಸಾಮಾಜಿಕ ಜಾಲತಾಣ, ಎಲೆಕ್ಟ್ರಾನಿಕ್ ಮೀಡಿಯಾಗಳಲ್ಲಿ ಹೇಳಿಕೆ ಕೊಡೋದು ಕಡಿಮೆಯಾದ್ರೆ ಒಳ್ಳೆಯದು ಎಂದು ಸದಾನಂದಗೌಡ ಎಚ್ಚರಿಕೆ ಕೊಟ್ಟಿದ್ದಾರೆ.