ಬೈಕ್ ನ ಮಿರರ್ ಬಸ್ ಗೆ ಟಚ್ ಆಗಿ ಅಪಘಾತ
ಬೆಂಗಳೂರು-ನಗರದ ಯಶವಂತಪುರದ ಮೆಟ್ರೋ ನಿಲ್ದಾಣ ಬಳಿ ಕಿಲ್ಲರ್ ಕೆ ಎಸ್ ಆರ್ ಟಿಸಿ ಬಸ್ ಗೆ ವ್ಯಕ್ತಿ ಬಲಿಯಾಗಿರುವ ಘಟನೆ ನಡೆದಿದೆ.ನಾಗಸಂದ್ರ ಏರಿಯಾದ ರಾಜೇಂದ್ರ (೪೫) ಮೃತ ದುರ್ದೈವಿಯಾಗಿದ್ದು,ಎಡಬದಿಯಲ್ಲಿ ಬೈಕ್ ನಲ್ಲಿ ವ್ಯಕ್ತಿ ಬರ್ತಿದ್ದ ಈ ವೇಳೆ ಬಲಬದಿಯಲ್ಲಿ ಬರ್ತಿದ್ದ ಕೆಎಸ್ ಆರ್ ಟಿಸಿ ಬಸ್ ಡಿಕ್ಕಿ ಹೊಡೆದು ಹಿಂಬದಿ ಚಕ್ರಕ್ಕೆ ಸಿಲುಕಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.ತಲೆ ಮೇಲೆ ಬಸ್ ಹರಿದ ಹಿನ್ನಲೆ ಸ್ಥಳದಲ್ಲೇ ವ್ಯಕ್ತಿ ಸಾವನ್ನಪ್ಪಿದ್ದು,ಸ್ಥಳಕ್ಕೆ ಯಶವಂತಪುರ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ನಗರದ ಯಶವಂತಪರದಲ್ಲಿ ಬೈಕ್ ಸಾವರ ಅಪಘಾತದಿಂದ ಸಾವನ್ನಾಪಿರುವ ವಿಷಯವಾಗಿ ಉತ್ತರ ವಿಭಾಗದ ಸಂಚಾರಿ ಡಿಸಿಪಿ ಸಿರಿಗೌರಿ ಪ್ರತಿಕ್ರಿಯಿಸಿದ್ದಾರೆ.ಇವತ್ತು ಬೆಳಗ್ಗೆ 10.30ರ ಸುಮಾರಿಗೆ ಮೆಟ್ರೋ ನಿಲ್ದಾಣದ ಕೆಳಗೆ ಘಟನೆ ನಡೆದಿದೆ.50ವರ್ಷದ ರಾಜೇಂದ್ರ ಎಂಬಾತ ಮೃತಪಟ್ಟಿದ್ದಾನೆ.ಖಾಸಗಿ ಕಂಪನಿಯಲ್ಲಿ ಕೆಲಸ ಮಾಡ್ತಿದ್ರು.ಜಿಎಸ್ ಟಿ ಆಫೀಸ್ ಗೆ ಹೋಗೋವಾಗ ಬಸ್ ಗೆ ಡಿಕ್ಕಿ ಹೊಡೆದು ಅಪಘಾತ ಆಗಿರುತ್ತೆ ಇನ್ನೂ ಘಟನೆಯ ಸಂಬಂಧ ತನಿಖೆಎಂದು ಉತ್ತರ ವಿಭಾಗದ ಸಂಚಾರಿ ಡಿಸಿಪಿ ಸಿರಿಗೌರಿ ಹೇಳಿದ್ದಾರೆ.