ಶಿವರಾತ್ರಿ ಹಬ್ಬಕ್ಕೆ ಗುಡ್ ನ್ಯೂಸ್ ಕೊಟ್ಟ KSRTC

geetha

ಮಂಗಳವಾರ, 5 ಮಾರ್ಚ್ 2024 (14:25 IST)
ಬೆಂಗಳೂರು-ಮಾರ್ಚ್ 8ರಂದು ಶಿವರಾತ್ರಿ 9 ಮತ್ತು10 ರಂದು ವಾರಾತ್ಯಂದ ಸಾಲು ಸಾಲು ರಜೆ ಹಿನ್ನೆಲೆ ಹೆಚ್ಚುವರಿಗೆ ಬಸ್ ನಿಗಮ ಬಿಟ್ಟಿದೆ.ಕೆಎಸ್ಆರ್ ಟಿಸಿ ಯಿಂದ 1500 ವಿಶೇಷ ಹೆಚ್ಚುವರಿ ಬಸ್ ಗಳ ಕಾರ್ಯಾಚರಣೆ ನಡೆಸಲಾಗಿದೆ.ಮಾರ್ಚ್ 7 ರಿಂದ ಮಾರ್ಚ್ 10ರವರೆಗೆ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಲಾಗಿದೆ.

ರಿಟರ್ನ್ ಜರ್ನಿಗೆ ಮಾರ್ಚ್ 10 ರಿಂದ 11 ರಂದು ಹೆಚ್ಚುವರಿ ಬಸ್ ಗಳ ಸೇವೆ ಇರಲಿದೆ.ರಾಜ್ಯ ಮತ್ತು ಅಂತರರಾಜ್ಯ ಸ್ಥಳಗಳಿಗೆ ವಿಶೇಷ ಬಸ್ ಕಾರ್ಯಚರಣೆ ನಡೆಸಿದೆ.ವಾಪಸ್ ಬರುವ ಪ್ರಯಾಣಿಕರಿಗೂ  ವಿಶೇಷ ವಾಹನಗಳು ಕಾರ್ಯಚರಣೆ ನಡೆಸಲಿದೆ.
 
ಮೆಜೆಸ್ಟಿಕ್ ಬಸ್ ನಿಲ್ದಾಣದಿಂದ ಧರ್ಮಸ್ಥಳ, ಕುಕ್ಕೆ ಸುಬ್ರಮಣ್ಯ,ಶಿವಮೊಗ್ಗ, ಹಾಸನ, ಮಂಗಳೂರುಕುಂದಾಪುರ, ಶೃಂಗೇರಿ,ಹೊರನಾಡು,ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯಪುರ, ಗೋಕರ್ಣ ,ತಿರುಪತಿ, ವಿಜಯವಾಡ, ಹೈದರಾಬಾದ್ ಸೇರಿದಂತೆ ವಿವಿಧ ಭಾಗಗಳಿಗೆ ವಿಶೇಷ ಬಸ್ ಕಾರ್ಯಚರಣೆ ನಡೆಸಲಿದೆ.ಮೈಸೂರು ರಸ್ತೆ ಬಸ್ ನಿಲ್ದಾಣದಿಂದ ಮೈಸೂರು, ಹುಣಸೂರು, ಪಿರಿಯಾಪಟ್ಟಣ, ವಿರಾಜಪೇಟೆ, ಕುಶಾಲನಗರ,ಮಡಿಕೇರಿ ಮಾರ್ಗಗಳಿಗೆ ಬಸ್ ಗಳು ಕಾರ್ಯಚರಣೆ ನಡೆಸಲಿದೆ.

ಟಿಕೆಟ್ ಬುಕಿಂಗ್ ಗೆ ಮುಂಗಡ ಆಸನಗಳನ್ನ ಕಾಯ್ದಿರಿಸಲು ಅವಕಾಶ ನೀಡಲಾಗಿದೆ.ಕಾಯ್ದಿರಿಸಿರುವ ಟಿಕೆಟ್ ಮೇಲೆ ಕೊಟ್ಟಿರುವ ಪಿಕ್ಆಪ್ ಪಾಯಿಂಟ್ ಹೆಸರು ಗಮನಿಸಲು ಸೂಚನೆ ನೀಡಿದ್ದು,ಇ-ಟಿಕೆಟ್ ಬುಕಿಂಗ್ ನ್ನು www.ksrtc.karnataka.gov.in ವೆಬ್ ಮೂಲಕ ಮಾಡಬಹುದು.4 ಅಥವಾ 5 ಪ್ರಯಾಣಿಕರು ಅಡ್ವಾನ್ಸ್ ಟಿಕೆಟ್ ಬುಕ್ ಮಾಡಿದ್ರೆ 5ರಷ್ಟು ರಿಯಾಯಿತಿ ಇರಲಿದೆ.ಹೋಗುವ ಮತ್ತು ಬರುವ ಪ್ರಯಾಣದ ಟಿಕೆಟ್ ಬುಕ್ ಮಾಡಿದ್ರೆ 10% ರಿಯಾಯಿತಿ ಇರಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ