ಎಸ್ಸೆಸ್ಸೆಲ್ಸಿಯಲ್ಲಿ ಜಸ್ಟ್ ಪಾಸಾದ ಸ್ನೇಹಿತನಿಗೆ ಬ್ಯಾನರ್ ಹಾಕಿ ಶುಭಕೋರಿದ ಸ್ನೇಹಿತರು

Sampriya

ಭಾನುವಾರ, 12 ಮೇ 2024 (15:27 IST)
ಮಂಗಳೂರು: ಎಸ್ಸೆಸ್ಸೆಲ್ಸಿಯಲ್ಲಿ ಪರೀಕ್ಷೆಯಲ್ಲಿ ಜಸ್ಟ್ ಪಾಸಾದ ಸ್ನೇಹಿತನಿಗೆ ಬ್ಯಾನರ್ ಹಾಕಿ ಸಂಭ್ರಮಿಸಿದ ಘಟನೆ ನಗರದ ಪಚ್ಚನಾಡಿಯಲ್ಲಿ ನಡೆಸಿದೆ.

2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಇದರಲ್ಲಿ ಸತೀ ಹೆಚ್ಚು ಅಂಕ ಗಳಿಸಿದರವಿಗೆ ಶುಭಶಾಯಗಳು ಬರುತ್ತಿದೆ. ಈ ಮಧ್ಯೆ  625ರಲ್ಲಿ 300ಅಂಕ ಗಳಿಸಿದ ಸ್ನೇಹಿತಬ ಸಾಧನೆಯನ್ನು ಸ್ನೇಹಿತರು ಬ್ಯಾನರ್‌ ಹಾಕಿ ಅಭಿನಂದಿಸಿ ಸಂಭ್ರಮಿಸಿದ್ದಾರೆ.

ವಿದ್ಯಾರ್ಥಿ ಹ್ಯಾಸ್ಲಿನ್ ಮೊದಲು ಪರೀಕ್ಷೆಯಲ್ಲಿ ಪಾಸಾಗುತ್ತಾನೋ ಎನ್ನುವ  ಗೊಂದಲ ಇತ್ತು. ಆದರೆ ಫಲಿತಾಂಶದಲ್ಲಿ ಹ್ಯಾಸ್ಲಿನ್‌ 300 ಅಂಕಗಳೊಂದಿಗೆ ಪಾಸಾಗಿದ್ದಾನೆ.

'ಅಪ್ಪ ಅಮ್ಮನ ಆಶೀರ್ವಾದದಿಂದ, ಊರವರ ಬೈಗುಳದಿಂದ, ಊರವರ ಪ್ರೋತ್ಸಾಹದಿಂದ, ಟ್ಯೂಷನ್‌ ಮಹಾತ್ಮೆಯಿಂದ, ಶಾಲೆಯ ಕಿರಿಕಿರಿಯಿಂದ, ಶಿಕ್ಷಕರ ಬೋಧನೆಯಿಂದ, ಸೈಕಲ್‌, ಕ್ರಾಕ್ಸ್‌, ಪಿಯುಸಿ ಆಮಿಷದಿಂದ ಎಲ್ಲರ ಕುತೂಹಲ, ಬ್ರೂಸ್ಲಿ (ಹ್ಯಾಸ್ಲಿನ್‌) ಪಾಸೋ ಫೇಲೋ, ಇಂದು ಆ ಚರ್ಚೆಗೆ ತೆರೆ ಬಿದ್ದಿದೆ. ತೋಚಿದ್ದು ಗೀಚಿ ಫೇಲ್ ಆಗುವವನು ಹರಕೆಯ ಬಲದಿಂದ, ಪ್ರಯತ್ನದ ಫಲದಿಂದ ಹೇಗೋ ಒಟ್ಟಾರೆ ನಮ್ಮ ಬ್ರೂಸ್ಲಿ ಜಸ್ಟ್‌ ಪಾಸಾಗಿರೋದೆ ನಮಗೆಲ್ಲ ಸಂಭ್ರಮ ಸಂಭ್ರಮ.. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 300 ಅಂಕ ಪಡೆದು ಉತ್ತೀರ್ಣನಾದ ಹ್ಯಾಸ್ಲಿನ್‌ ನಿಮಗೆ ಅಭಿನಂದನೆಗಳು' ಎಂದು ಇತಿ ಹ್ಯಾಸ್ಲಿನ್‌ (ಬ್ರೂಸ್ಲಿ) ಹಿತೈಷಿಗಳು, ಯುವ ಫ್ರೆಂಡ್ಸ್‌ ಮಂಗಳಾನಗರ ಎಂದು ಬ್ಯಾನರ್‌ನಲ್ಲಿ ಬರೆಯಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ