ನನಗೆ ಕನ್ನಡ ಶುದ್ಧವಾಗಿ ಓದಲು ಬರುವುದಿಲ್ಲ: ಸಚಿವ ಮಧು ಬಂಗಾರಪ್ಪ

Sampriya

ಶನಿವಾರ, 11 ಮೇ 2024 (15:24 IST)
ಶಿವಮೊಗ್ಗ: ನನಗೆ ಕನ್ನಡ ಅಷ್ಟೊಂದು ಶುದ್ಧವಾಗಿ ಓದಲು ಬರುವುದಿಲ್ಲ. ಕನ್ನಡ ಉಚ್ಚಾರಣೆಯಲ್ಲಿ ತಪ್ಪಾಗುತ್ತದೆ. ಅದನ್ನು ಕೆಲವರು ಕೆಟ್ಟದಾಗಿ ಟ್ರೋಲ್ ಮಾಡುತ್ತಾರೆ, ಅಂತವರು ಯಾವುದೇ ಕಾರಣಕ್ಕೂ ಉದ್ಧಾರವಾಗಲ್ಲ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಶಾಪ ಹಾಕಿದರು.

2023-2024ನೇ ಸಾಲಿನ ಎಸ್​ಎಸ್​ಎಲ್​ಸಿ ಪರೀಕ್ಷೆಯ ಫಲಿತಾಂಶದ ಬಗ್ಗೆ ಮಾಧ್ಯಮದ ಜತೆ ಮಾತನಾಡಿದ ಅವರು ನಾನು ವಿದ್ಯಾಭ್ಯಾಸದಲ್ಲಿ ಅಷ್ಟೊಂದು ಬುದ್ದಿವಂತನಾಗಿರಲಿಲ್ಲ. ನಾನು ಸಹ ಫೇಲ್ ಆಗಿದ್ದೇನೆ. ನನಗೆ ಕನ್ನಡ ಅಷ್ಟು ಶುದ್ಧವಾಗಿ ಓದಲು ಬರಲ್ಲ ಎಂದು ಹೇಳಿದರು.

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಬಾಗಲಕೋಟೆ ಜಿಲ್ಲೆಯ ಮಳ್ಳಿಗೇರಿ ಮುರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿನಿ ಅಂಕಿತಾ ಬಸಪ್ಪ ಕೊಣ್ಣೂರ‌‌‌  625ಕ್ಕೆ 625 ಅಂಕ ಪಡೆಯುವ ಮುಖಾಂತರ ಸಾಧನೆ ಮಾಡಿದ್ದು, ಅವರಿಗೆ ನಮ್ಮ ಇಲಾಖೆ ಪರವಾಗಿ ವಿದ್ಯಾರ್ಥಿನಿ ಮತ್ತು ಆಕೆಯ ಪೋಷಕರಿಗೆ ಧನ್ಯವಾದ ತಿಳಿಸುತ್ತೇನೆ ಎಂದರು.


 
Photo Courtesy X

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ