ಕೇಂದ್ರ ಸರ್ಕಾರ ನಿರ್ಭಯ ನಿಧಿ ಅಡಿಯಲ್ಲಿ ೧೪ ಕೋಟಿ ರುಪಾಯಿ ಎಫ್ ಎಸ್ ಎಲ್ ಬಿಡುಗಡೆ

ಮಂಗಳವಾರ, 3 ಆಗಸ್ಟ್ 2021 (18:40 IST)
ಕೇಂದ್ರ ಸರ್ಕಾರ ನಿರ್ಭಯ ನಿಧಿ ಅಡಿಯಲ್ಲಿ ೧೪ ಕೋಟಿ ರುಪಾಯಿಯನ್ನು ಎಫ್ ಎಸ್ ಎಲ್ ಬಿಡುಗಡೆ ಮಾಡಲಾಗಿದ್ದು ಈ ಹಿನ್ನೆಲೆಯಲ್ಲಿ ತಂಡವನ್ನು ಬಲಪಡಿಸಲು ಇಲಾಖೆ ಂಎರಡು ಪಟ್ಟು ಕಾರ್ಮಿಕರನ್ನು ಮತ್ತು ಮೊಬೈಲ್ ಲ್ಯಾಬ್‌ಗಳನ್ನು ಅಳವಡಿಸಿಕೊಳ್ಳಲಿದೆ. ಇದರಿಂದ ತನಿಖೆಯನ್ನು ಚುರುಕುಗೊಳಿಸುವ ಆಶಾಭಾವನೆ ಹೊಂದಿದೆ.   
ಮಹಿಳೆಯರ ಮೇಲಿನ ದೌರ್ಜನ್ಯ , ಅತ್ಯಾಚಾರ ಹಾಗೂ ಲೈಂಗಿಕ ಕಿರುಕುಳ ಪ್ರಕರಣಗಳ ತನಿಖೆಯಲ್ಲಿ ವಿಧಿವಿಜ್ಞಾನ ಪ್ರಮುಖ ಪಾತ್ರವಹಿಸುತ್ತದೆ.
ಎಫ್‌ಎಸ್‌ಎಲ್ ವರದಿ ನೀಡುವಲ್ಲಿ ವಿಳಂಬವಾಗುತ್ತಿತ್ತು. ಪ್ರಕರಣಗಳು ಶೀಘ್ರವಾಗಿ ಇತ್ಯರ್ಥವಾಗದೆ ತಲೆನೋವಾಗಿತ್ತು. ಈಗ ಕಾರ್ಮಿಕರ ಹೆಚ್ಚಳ ಮತ್ತು ಅತ್ಯಾಧುನಿಕ ತಂತ್ರಜ್ಞಾನ ಹೊಂದಿದ ಮೊಬೈಲ್ ಲ್ಯಾಬ್ ಗಳ ಅಳವಡಿಕೆ ಆಶಾಭಾವನೆ ಮೂಡಿಸಿದೆ ಎಂದು ಎಫ್‌ಎಸ್‌ಎಲ್ ಪ್ರಕಟಣೆಯಲ್ಲಿ ತಿಳಿಸಿದೆ.
ವಿಧಿವಿಜ್ಞಾನದಲ್ಲಿ ಪರಿಣಿತಿ ಹೊಂದಿರುವ ಪೊಲೀಸ್ ಅಧಿಕಾರಿಗಳು ಅಪರಾಧ ನಡೆದ ಸ್ಥಳಕ್ಕೆ ಬೇಟಿ ನೀಡಿ ಸಾಕ್ಷಗಳನ್ನು ಸಂಗ್ರಹಿಸಲು ಎಫ್‌ಎಸ್‌ಎಲ್ ಕಾರ್ಮಿಕರನ್ನು ಹೆಚ್ಚಳ ಮಾಡಲು ಹೊರಟಿರುವದು ಹೊಸ ಹಜ್ಜೆ ಇಟ್ಟಂತಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ