ದಲಿತ ನಾಯಕ ಡಾ ಜಿ ಪರಮೇಶ್ವರ್ ಒಡೆತನದಲ್ಲಿದೆ ಭಾರೀ ಆದಾಯ ತರುವ ಶಿಕ್ಷಣ ಸಂಸ್ಥೆಗಳು

Krishnaveni K

ಗುರುವಾರ, 22 ಮೇ 2025 (11:16 IST)
ತುಮಕೂರು: ಕಾಂಗ್ರೆಸ್ ನಲ್ಲಿ ದಲಿತ ನಾಯಕ ಎಂಬ ಹಣೆಪಟ್ಟಿ ಹೊಂದಿರುವ ಗೃಹಸಚಿವ ಡಾ ಜಿ ಪರಮೇಶ್ವರ್ ಒಡೆತನದಲ್ಲಿದೆ ಭಾರೀ ಆದಾಯ ತರುವ ಶಿಕ್ಷಣ ಸಂಸ್ಥೆಗಳು.

ಡಾ ಜಿ. ಪರಮೇಶ್ವರ್ ಒಡೆತದಲ್ಲಿ ಸಾಕಷ್ಟು ಪದವಿ, ಇಂಜಿನಿಯರಿಂಗ್, ಡೆಂಟಲ್, ಮೆಡಿಕಲ್ ಕಾಲೇಜುಗಳಿವೆ. ಸಿದ್ಧಾರ್ಥ ಸಮೂಹ ಸಂಸ್ಥೆಗಳು ಎಂಬ ಹೆಸರಿನಲ್ಲಿ ಸಾಕಷ್ಟು ಕಾಲೇಜುಗಳು ಕರ್ನಾಟಕದಾದ್ಯಂತ ಕೆಲಸ ಮಾಡುತ್ತಿವೆ.

ತುಮಕೂರಿನಲ್ಲಿ ಮಾತ್ರವಲ್ಲದೆ ಕರ್ನಾಟಕದ ದಕ್ಷಿಣ ಭಾಗದಲ್ಲೂ ಈ ಸಂಸ್ಥೆಯ ಕಾಲೇಜುಗಳಿವೆ. ಮೂಲಗಳ ಪ್ರಕಾರ ಸುಮಾರು 85 ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳು ಪರಮೇಶ್ವರ್ ಒಡೆತನದಲ್ಲಿದೆ. ಇದು ನಮ್ಮ ತಂದೆಯ ಕಾಲದಲ್ಲೇ ಆರಂಭವಾಗಿದ್ದು ಎನ್ನುತ್ತಾರೆ ಪರಮೇಶ್ವರ್.

ಇಂಜಿನಿಯರಿಂಗ್, ಮೆಡಿಕಲ್ ಅಲ್ಲದೆ ಟಿಸಿಎಚ್ ಸೆಂಟರ್, ನರ್ಸಿಂಗ್ ಕಾಲೇಜು, ಫಸ್ಟ್ ಗ್ರೇಡ್ ಕಾಲೇಜು, ಪತ್ರಿಕೋದ್ಯಮ ಮತ್ತು ಸಮೂಹ ಮಾಧ್ಯಮ ಶಿಕ್ಷಣ ನೀಡುವ ಕಾಲೇಜುಗಳಿವೆ. ಸಿದ್ಧಾರ್ಥ ಎಜುಕೇಷನ್ ಟ್ರಸ್ಟ್ ಹೆಸರಿನಲ್ಲಿ ಶಿಕ್ಷಣ ಸಂಸ್ಥೆಗಳು ನಡೆಯುತ್ತಿವೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ