ತಾಂತ್ರಿಕ ಶಿಕ್ಷಣ ಇಲಾಖೆಗೆ ಆಟ, ವಿದ್ಯಾರ್ಥಿಗಳಿಗೆ ಪ್ರಾಣ ಸಂಕಟ

ಮಂಗಳವಾರ, 30 ನವೆಂಬರ್ 2021 (20:07 IST)
ತಾಂತ್ರಿಕ ಶಿಕ್ಷಣ ಇಲಾಖೆಗೆ ಆಟ, ವಿದ್ಯಾರ್ಥಿಗಳಿಗೆ ಪ್ರಾಣ ಸಂಕಟ- ಪರೀಕ್ಷೆ ಆಗದೇ ವಿದ್ಯಾರ್ಥಿಗಳಿಗೆ ಪದವಿ ಪ್ರವೇಶ ಅಸಾಧ್ಯ- ಲ್ಯಾಟರಲ್ ಎಂಟ್ರಿ ಮೂಲಕ ಪದವಿ ಪ್ರವೇಶ ಪಡೆಯುವ ಡಿಪ್ಲೊಮಾ ವಿದ್ಯಾರ್ಥಿಗಳಗೆ ತಪ್ಪದ ಸಂಕಷ್ಟ- ಥಿಯರಿ ಪರೀಕ್ಷೆ ನಡೆಸಿ, ಪ್ರಾಯೋಗಿಕ ಪರೀಕ್ಷೆ ಇನ್ನೂ ನಡೆಸದ ಇಲಾಖೆ- ಅತಂತ್ರಕ್ಕೆ ಸಿಲುಕಿದ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ- ಪ್ರಾಯೋಗಿಕ ಪರೀಕ್ಷೆ ನಡೆಸದ ಕಾರಣ ಇನ್ನು ಫಲಿತಾಂಶ ನೀಡೋಕೆ ಆಗೊಲ್ಲ- ಸದ್ಯ ಪದವಿ ಕೋರ್ಸ್ ಗಳ ಪ್ರವೇಶ ಪ್ರಕ್ರಿಯೆ ಮುಗಿದಿದ್ದು, ದ್ವಿತೀಯ ವರ್ಷದ ಪದವಿ ತರಗತಿಗೆ ಬೋಧನೆ ಕೂಡ ಆರಂಭವಾಗಿದೆ- ಮೂರು ವರ್ಷದ ಡಿಪ್ಲೊಮಾ ವ್ಯಾಸಾಂಗ ಮಾಡುತ್ತಿರುವ ವಿದ್ಯಾರ್ಥಿಗಳು ಲ್ಯಾಟರಲ್ ಎಂಟ್ರಿ ಮೂಲಕ ದ್ವಿತೀಯ ವರ್ಷದ ಪದವಿ ಕೋರ್ಸ್ ಪ್ರವೇಶ ಪಡೆಯುತ್ತಾರೆ- ಈ ಪದವಿ ಪಡೆಯಲು ಡಿಪ್ಲೊಮಾ ಕೋರ್ಸ್ ಪೂರೈಸಿರುವ ಪ್ರಮಾಣ ಪತ್ರ ಅವಶ್ಯಕ- ಥಿಯರಿ ಪರೀಕ್ಷೆ ಬಳಿಕ ಪ್ರಾಯೋಗಿಕ ಪರೀಕ್ಷೆ ನಡೆಸಿ ಫಲಿತಾಂಶ ನೀಡಬೇಕು- ಆದರೆ ಥಿಯರಿ ಪರೀಕ್ಷೆಗಳನ್ನ ಅಕ್ಟೋಬರ್ ತಿಂಗಳಲ್ಲಿ ಮುಗಿಸಿ, ಪ್ರಾಯೋಗಿಕ ಪರೀಕ್ಷಾ ದಿನಾಂಕವನ್ನ ಇನ್ನೂ ಪ್ರಕಟಿಸದೆ ಸುಮ್ಮನಿರುವ ತಾಂತ್ರಿಕ ಶಿಕ್ಷಣ ಇಲಾಖೆ- ಕಾಲೇಜು ಶಿಕ್ಷಣ ಇಲಾಖೆಗೆ ಪತ್ರದ ಮೂಲಕ ಮನವಿ ಮಾಡಿರುವ ವಿದ್ಯಾರ್ಥಿಗಳು- ಯಾವುದಕ್ಕೂ ತಲೆಕಡಿಸಿಕೊಳ್ಳದ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ- ಬಾಕಿ ಪರೀಕ್ಷೆ ನಡೆಸಿ ಫಲಿತಾಂಶ ಪ್ರಕಟಿಸದಿದ್ದರೆ ಒಂದು ವರ್ಷ ವಿದ್ಯಾರ್ಥಿಗಳ ವಿದ್ಯಾಭ್ಯಾಸ ವ್ಯರ್ಥ- ಬೇಗ ಪ್ರಾಯೋಗಿಕ ಪರೀಕ್ಷೆ ನಡೆಸುವಂತೆ ವಿದ್ಯಾರ್ಥಿಗಳಿಂದ ಒತ್ತಡ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ