ಕನ್ನಡ ಚಳುವಳಿ ಪಕ್ಷದ ವಾಟಾಳ್ ನಾಗರಾಜ್ ರಿಂದ ಆಳೆತ್ತರ ಉಪ್ಪಿನ ಪ್ಯಾಕೆಟ್ ಇಟ್ಟು ಗಾಂಧಿ ಜಯಂತಿ

ಶನಿವಾರ, 2 ಅಕ್ಟೋಬರ್ 2021 (21:27 IST)
ಬೆಂಗಳೂರು: ಮಹಾತ್ಮ ಗಾಂಧೀಜಿ ಜಯಂತಿ ಹೊಂದಿರುವ ಮಹಾತ್ಮ ಗಾಂಧೀಜಿ ಫೋಟೋ ಗೆ ಪುಷ್ಪ ನಮನ ಹಾಗೂ ಆಳೆತ್ತರದ ಉಪ್ಪಿನ ಪ್ಯಾಕೆಟ್ ಗಳು ಮುಂದೆ ಇಟ್ಟು ವಿನ್ನೂತನವಾಗಿ ಗಾಂಧೀಜಿ ಹುಟ್ಟು ಹಬ್ಬವನ್ನು ಕನ್ನಡ ಚಳುವಳಿ ವಾಟಾಳ್ ಪಕ್ಷದ ವಾಟಾಳ್ ನಾಗರಾಜ್ ಕೈಗೊಂಡರು. 
 
ರಾಜಧಾನಿಯ ಮೆಜೆಸ್ಟಿಕ್ ನ ಬಸ್ ನಿಲ್ದಾಣದ ಬಳಿ ಗಾಂಧೀಜಿ ಜಯಂತಿ ಯನ್ನು ಆಚರಣೆ ಮಾಡಿದರು. ಕಾರ್ಯಕ್ರಮದ ನಂತರ ಉಪ್ಪಿನ ಪ್ಯಾಕೆಟ್ ಗಳನ್ನು ಸಾರ್ವಜನಿಕರಿಗೆ ಹಂಚುವ ಮೂಲಕ ಗಾಂಧೀಜಿ ರನ್ನು ವಾಟಾಳ ನಾಗರಾಜ್ ನೆನೆದರು. 
 
ಕಾರ್ಯಕ್ರಮದಲ್ಲಿ ಮಾತನಾಡಿದ ವಾಟಾಳ್ ನಾಗರಾಜ್ ದೇಶದ ರಾಜಕೀಯ ನಾಯಕರು ಹಡಿಕೆಟ್ಟು ಹೋಗಿದ್ದಾರೆ. ಎಲ್ಲಾ ರಾಜಕೀಯ ನಾಯಕರಾದ ಸಿಎಂ, ಮಂತ್ರಿಗಳು, ಮತ್ತು ಎಂಎಲ್‌ಎ ಮತ್ತು ಎಂಪಿಗಳಿಗೆ ಹರಾಜು ಮೂಲಕ ಪಡೆಯುವುದು, ದೇಶದ ರಾಜಕೀಯ ವಲಯದಲ್ಲಿ ಪ್ರಮಾಣಿಕತೆ ಕಡಿಮೆಯಾಗಿದೆ. ಈ ರೀತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ದೇಶದ ಜನರಿಗೆ ಜೀವನ ಮಾಡುವುದು ತುಂಬಾ ಕಷ್ಟ ಆಗುತ್ತಿದೆ ಎಂದು ಟೀಕೆ ಮಾಡಿದರು. 
 
ಈ ವೇಳೆ ಕೆಲವು ಜನರನ್ನು ಗಾಂಧೀಜಿ ಹೇಗೂ ಇಲ್ಲ ಕನ್ನಡ ಕನ್ನಡ ಹೊರಟಗಾರರ ವಾಟಾಳ್ ನಾಗರಾಜ್ ರೊಂದಿಗೆ ಫೋಟೋ ಕ್ಲಿಕ್ ಮಾಡುವ ಮೂಲಕ ಖುಷಿ ಪಟ್ಟರ್
ವಾಟಾಳ್

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ