ಬೆಂಗಳೂರು(ಜು.24): ಮೂರು ವರ್ಷದ ಬಾಲಕ ಗಣೇಶ ವಿಗ್ರಹವನ್ನು ನುಂಗಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ತಕ್ಷಣದ ವೈದ್ಯಕೀಯ ನೆರವು ಸಿಕ್ಕಿದ ನಂತರ ಸುಮಾರು 5 ಸೆಂಟಿಮೀಟರ್ ಉದ್ದದ ಭಗವಾನ್ ಗಣೇಶ ವಿಗ್ರಹವನ್ನು ನುಂಗಿದ ಮೂರು ವರ್ಷದ ಬಾಲಕ ಪವಾಡಸದೃಶವಾಗಿ ಪಾರಾಗಿದ್ದಾನೆ.
•ಗಣೇಶ ವಿಗ್ರಹವನ್ನು ನುಂಗಿದ ಮೂರು ವರ್ಷದ ಬಾಲಕ
•ತಕ್ಷಣದ ಚಿಕಿತ್ಸೆ, ಅದೃಷ್ಟವಶಾತ್ ಬದುಕುಳಿದ ಕಂದ
ಮಗು ಬಸವ ಅವರನ್ನು ಓಲ್ಡ್ ಏರ್ಪೋರ್ಟ್ ರಸ್ತೆಯ ಮಣಿಪಾಲ್ ಆಸ್ಪತ್ರೆಗೆ ಶುಕ್ರವಾರ ರವಾನಿಸಲಾಗಿದೆ. ಆಡುವಾಗ ಬಾಲಕ ವಿಗ್ರಹವನ್ನು ನುಂಗಿದ್ದ. ಮೇಲ್ಭಾಗದ ಎದೆಯಲ್ಲಿ ನೋವು ಮತ್ತು ಉಗುಳು ನುಂಗುವಲ್ಲಿ ತೊಂದರೆ ಉಂಟಾಯಿತು. ಆರಂಭದಲ್ಲಿ, ಎದೆ ಮತ್ತು ಕುತ್ತಿಗೆ ಎಕ್ಸರೆ ಮಾಡಲಾಯಿತು. ನಂತರ ವಿಗ್ರಹ ಬಾಲಕ ನುಂಗಿರುವುದು ಬೆಳಕಿಗೆ ಬಂದಿದೆ.
ನಂತರ ವೈದ್ಯರು ಎಂಡೋಸ್ಕೋಪಿಕ್ ವಿಧಾನವನ್ನು ಬಳಸಿಕೊಂಡು ವಿಗ್ರಹವನ್ನು ತೆಗೆದುಹಾಕಲು ಯೋಜಿಸಿದರು. ಮಗುವನ್ನು ಒಂದು ಗಂಟೆಯೊಳಗೆ ಎಂಡೋಸ್ಕೋಪಿ ಸೂಟ್ಗೆ ಕರೆದೊಯ್ಯಲಾಯಿತು. ಅರಿವಳಿಕೆ ನೀಡಿ ಸುರಕ್ಷಿತವಾಗಿ ವಿಗ್ರಹ ತೆಗೆದುಹಾಕಲಾಯಿತು.
ಇದು ಎದೆಯಲ್ಲಿ ಸೋಂಕು ಸೇರಿದಂತೆ ಅನ್ನನಾಳದ ರಂದ್ರಕ್ಕೆ ಕಾರಣವಾಗಬಹುದು ಎಂದು ಪೀಡಿಯಾಟ್ರಿಕ್ ಗ್ಯಾಸ್ಟ್ರೋಎಂಟರಾಲಜಿಸ್ಟ್ ಡಾ.ಶ್ರೀಕಾಂತ್ ಕೆ.ಪಿ. ಹೇಳಿದ್ದಾರೆ. ಓಲ್ಡ್ ಏರ್ಪೋರ್ಟ್ ರಸ್ತೆಯ ಮಣಿಪಾಲ್ ಆಸ್ಪತ್ರೆಗಳ ಆಸ್ಪತ್ರೆ ನಿರ್ದೇಶಕ ಡಾ.ಮನೀಶ್ ರೈ, ಅವರು ರೋಗಿಯನ್ನು ಮಕ್ಕಳ ತುರ್ತುಸ್ಥಿತಿಗೆ ಕರೆತಂದಾಗ ತಕ್ಷಣ ಮತ್ತು ತ್ವರಿತ ಚಿಕಿತ್ಸೆ ನೀಡಲಾಗಿದೆ ಎಂದಿದ್ದಾರೆ