ಗೌರಿ ಲಂಕೇಶ್ ಹತ್ಯೆ ಪ್ರಕರಣ: ಕಣ್ಣೀರಿಟ್ಟ ಅಮಿತ್ ನ ತಾಯಿ, ಪತ್ನಿ
ಗುರುವಾರ, 23 ಆಗಸ್ಟ್ 2018 (15:49 IST)
ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಅಮಾಯಕನಾದ ನನ್ನ ಮಗನನ್ನು ಸಿಲುಕಿಸಲಾಗಿದೆ. ಎಸ್ ಐ ಟಿ ಅಧಿಕಾರಿಗಳು ಯಾವುದೇ ಸಾಕ್ಷಾಧಾರಗಳಿಲ್ಲದೆ ನನ್ನ ಮಗನನ್ನು ಬಂಧಿಸಿದ್ದಾರೆ ಎಂದು ಬಂಧಿತ ಆರೋಪಿ ಅಮಿತ್ ಬದ್ದಿ ತಾಯಿ ಜಯಶ್ರೀ ಬದ್ದಿ ಕಣ್ಣೀರು ಹಾಕಿದ್ದಾರೆ.
ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೂ ಅಮಿತ್ ಬದ್ದಿಗೂ ಸಂಬಂಧವಿಲ್ಲ. ಅಮಾಯಕನನ್ನು ವಿನಾಕಾರಣ ಬಂಧಿಸಿ ಕಿರುಕುಳ ನೀಡಲಾಗುತ್ತಿದೆ. ಥರ್ಡ್ ಡಿಗ್ರೀ ಟ್ರೀಟ್ಮೆಂಟ್ ಕೊಡಲಾಗಿದೆ. ನಮ್ಮ ಕುಟುಂಬಕ್ಕೆ ಮಾನಸಿಕ ಆಘಾತವಾಗಿದೆ. ಸಮಾಜದಲ್ಲಿ ತಲೆ ಎತ್ತಿ ಬದುಕಲು ಆಗದ ಸ್ಥಿತಿ ನಿರ್ಮಾಣವಾಗಿದೆ. ಅಮಿತ್ ಬದ್ದಿ ಬಿಡುಗಡೆಗೆ ಸಹಕರಿಸುವಂತೆ ಕವಿತಾ ಲಂಕೇಶ್, ಇಂದ್ರಜಿತ್ ಲಂಕೇಶ್, ಗೃಹಸಚಿವರು ಹಾಗೂ ಹೈಕೋರ್ಟ್ ನ್ಯಾಯಮೂರ್ತಿಗಳಿಗೆ ಪತ್ರ ಬರೆದು ಮನವಿ ಮಾಡಿದ್ದೇವೆ ಎಂದರು.
ಅಮಿತ್ ಬದ್ದಿ ಬಂಧನದಿಂದ ಕುಟುಂಬ ನಿರ್ವಹಣೆ ಕಷ್ಟವಾಗಿದೆ ಎಂದು ಪತ್ನಿ ಅಂಜಲಿ ಬದ್ದಿ ಕಣ್ಣೀರು ಹಾಕಿದರು. ಅವರೆ ನಮ್ಮ ಮನೆಗೆ ಆಧಾರವಾಗಿದ್ದರು. ಅವರು ಯಾವ ತಪ್ಪನ್ನೂ ಮಾಡಿಲ್ಲ. ಇದರಿಂದ ನಿತ್ಯ ಮಾನಸಿಕ ಹಿಂಸೆ ಅನುಭವಿಸುತ್ತಿದ್ದೇವೆ. ನಮ್ಮ ಮೇಲೆ ದಯೆ ತೋರಿ ನನ್ನ ಪತಿಯನ್ನು ಬಿಡುಗಡೆ ಮಾಡಬೇಕು ಎಂದು ಸುದ್ಧಿಗೋಷ್ಠಿಯಲ್ಲಿ ಕಣ್ಣೀರಿಟ್ಟರು.