ಬಿಸ್ಕತ್ ಎಸೆದ ಪ್ರಕರಣಕ್ಕೆ ಸಚಿವ ಎಚ್ ಡಿ ರೇವಣ್ಣ ಕೊಟ್ಟ ಸಮಜಾಯಿಷಿ ಏನು?
ಬುಧವಾರ, 22 ಆಗಸ್ಟ್ 2018 (09:48 IST)
ಬೆಂಗಳೂರು: ಕೊಡಗಿನ ಪ್ರವಾಹ ಸಂತ್ರಸ್ತರಿಗೆ ಆಹಾರ ವಿತರಿಸುವಾಗ ಬಿಸ್ಕತ್ ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಾಪಕ ಟೀಕೆ ವ್ಯಕ್ತವಾದ ಹಿನ್ನಲೆಯಲ್ಲಿ ಸಚಿವ ಎಚ್ ಡಿ ರೇವಣ್ಣ ಪ್ರತಿಕ್ರಿಯಿಸಿದ್ದಾರೆ.
‘ಎಲ್ಲರಿಗೂ ಬಿಸ್ಕತ್ ಸಿಗಲಿ ಎಂಬ ಕಾರಣಕ್ಕೆ ಎಸೆದಿದ್ದೆ. ಆದರೆ ಯಾವುದೇ ದುರಹಂಕಾರದಿಂದ ಬಿಸ್ಕತ್ ಎಸೆಯಲಿ. ಅವರಿಗೆ ಅವಮಾನ ಮಾಡುವ ಉದ್ದೇಶ ನನಗಿರಲಿಲ್ಲ. ಒಂದು ವೇಳೆ ನಾನು ಮಾಡಿದ್ದು ತಪ್ಪು ಎಂದಾದರೆ ಕ್ಷಮೆ ಯಾಚಿಸುವೆ’ ಎಂದು ರೇವಣ್ಣ ಸ್ಪಷ್ಟನೆ ಕೊಟ್ಟಿದ್ದಾರೆ.
‘ಒಂದು ವೇಳೆ ನನಗೆ ದುರಹಂಕಾರ ಇದ್ದಿದ್ದರೆ ನಾಲ್ಕು ದಿನ ಪರಿಹಾರ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಿರಲಿಲ್ಲ. ಹಾಲು, ಆಹಾರ, ಹೊದಿಕೆ ವಿತರಿಸುತ್ತಿರಲಿಲ್ಲ’ ಎಂದು ರೇವಣ್ಣ ಸಮಜಾಯಿಷಿ ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.