ಗೌರಿ ಲಂಕೇಶ್ ಹತ್ಯೆ: ಮಾಜಿ ಭೂಗತ ದೊರೆ ಮುತ್ತಪ್ಪರೈ ಹೇಳಿಕೆ ದಾಖಲು

ಮಂಗಳವಾರ, 19 ಸೆಪ್ಟಂಬರ್ 2017 (20:37 IST)
ಹಿರಿಯ ಪತ್ರಕರ್ತೆ, ವಿಚಾರವಾದಿ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ಅಧಿಕಾರಿಗಳು ಹೇಳಿಕೆ ದಾಖಲು ಮಾಡಿಕೊಂಡಿದ್ದಾರೆ ಎಂದು ಜಯ ಕರ್ನಾಟಕ ಸಂಘಟನೆಯ ಮುಖ್ಯಸ್ಥ ಮುತ್ತಪ್ಪ ರೈ ಹೇಳಿದ್ದಾರೆ.
ವಿಶೇಷ ತನಿಖಾ ತಂಡದ ಅಧಿಕಾರಿಗಳು ಇಂದು ಸಂಜೆ ನನ್ನ ಮನೆಗೆ ಆಗಮಿಸಿ ಹೇಳಿಕೆ ಪಡೆದಿದ್ದಾರೆ ಎಂದು ಮುತ್ತಪ್ಪ ರೈ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. 
 
ಗೌರಿ ಲಂಕೇಶ್‌ರೊಂದಿಗೆ ನನಗೆ ಯಾವುದೇ ಸಂಪರ್ಕವಿರಲಿಲ್ಲ. ಕಳೆದ 2003ರಲ್ಲಿ ನನ್ನ ವಿರುದ್ಧ ಲೇಖನ ಬರೆದಿದ್ದಕ್ಕಾಗಿ ನಾನು ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಕೇಸ್ ದಾಖಲಿಸಿದ್ದೆ. ಅದರ ಹೊರತಾಗಿ ಅವರಿಗೂ ನನಗೂ ಯಾವುದೇ ಸಂಪರ್ಕವಿಲ್ಲ ಎಂದು ಸ್ಪಷ್ಟಪಡಿಸಿದ್ದಾಗಿ ಹೇಳಿದ್ದಾರೆ.
     
ನನ್ನ ತಾಯಿ ನಿಧನ ಹೊಂದಿದ್ದರಿಂದ ಧಾರ್ಮಿಕ ಕಾರ್ಯಗಳಿಂದಾಗಿ ನಾನು ಮಂಗಳೂರಿನಲ್ಲಿಯೇ ಇದ್ದೆ. ಗೌರಿ ಲಂಕೇಶ್ ಹತ್ಯೆ ನಡೆದಿದ್ದು ಅದೇ ದಿನ. ಆದರೆ, ಇದೀಗ ಎಸ್‌ಐಟಿ ಅಧಿಕಾರಿಗಳು ನನ್ನ ಹೇಳಿಕೆ ಪಡೆದಿದ್ದಾಗಿ ಜಯ ಕರ್ನಾಟಕ ಸಂಘಟನೆ ಮುಖ್ಯಸ್ಥ ಮುತ್ತಪ್ಪ ರೈ ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ