ಗೌರಿ ಲಂಕೇಶ್ ಹತ್ಯೆಗೂ ಸುಳ್ಯದವರಿಗೂ ಇದೆಯಾ ನಂಟು?

ಸೋಮವಾರ, 30 ಜುಲೈ 2018 (09:30 IST)
ಮಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಗೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಎಸ್ಐಟಿ ತಂಡ ದ.ಕ. ಜಿಲ್ಲೆಯ ಸುಳ್ಯ ತಾಲೂಕಿನ ನಾಲ್ವರಿಗೆ ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಿದೆ.
 

ಸುಳ್ಯ ತಾಲೂಕಿನ ಕೊಲ್ಲಮೊಗರು ನಿವಾಸಿಗಳಾದ ಮೋಹನ ಚಾಂತಾಳ, ಯತೀಶ್ ಮೊಗ್ರ, ಯತೀನ್ ಅಂಬೆಕಲ್ಲು ಮತ್ತು ಕುಮುದಾಕ್ಷ ಜಾಲಮನೆ ಎಂಬವರಿಗೆ ಎಸ್ ಐಟಿ ಇಂದು ಬೆಂಗಳೂರಿನಲ್ಲಿ ತನಿಖೆಗೆ ಹಾಜರಾಗಲು ಸೂಚಿಸಿದೆ.

ಗೌರಿ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿಗಳು ನೀಡಿದ ಸುಳಿವಿನ ಮೇರೆಗೆ ಇವರಿಗೆ ನೋಟಿಸ್ ನೀಡಲಾಗಿದೆ. ಈ ನಡುವೆ ಉಪ್ಪಿನಂಗಡಿ ಬಳಿಯ ಕೊಕ್ಕಡ ನಿವಾಸಿ ಜಯರಾಮ ಎಂಬವರನ್ನೂ ಎಸ್ ಐಟಿ ವಿಚಾರಣೆ ನಡೆಸಿ ಬಿಟ್ಟಿದೆ ಎನ್ನಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.      

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ