ಖತರ್ನಾಕ್ ಪುಂಡರ ಗ್ಯಾಂಗ್: ಇವರೇನು ಮಾಡ್ತಿದ್ದರು ಗೊತ್ತಾ?

ಸೋಮವಾರ, 21 ಜನವರಿ 2019 (16:49 IST)
ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಹಾಯಾಗಿ ತಿರುಗಾಡುತ್ತಿದ್ದ ಖತರ್ನಾಕ್ ಪುಂಡರ ಗ್ಯಾಂಗ್ ಬಂಧನ ಮಾಡಲಾಗಿದೆ.

ರಾಜಧಾನಿ ಸೇರಿದಂತೆ ಸುತ್ತಲಿನ ಪ್ರದೇಶಗಳಲ್ಲಿ ಜನರ ನಿದ್ದೆಗೆಡಿಸಿದ್ದ ಖತರ್ನಾಕ್ ಪುಂಡರು ಈಗ ಕಂಬಿ ಹಿಂದೆ ಸರಿದಿದ್ದಾರೆ.
ಹಲವು ಪ್ರಕರಣಗಳಲ್ಲಿ ಪೊಲೀಸರಿಗೆ  ಬೇಕಾಗಿದ್ದ ಗ್ಯಾಂಗ್ ಕೊನೆಗೂ ಖಾಕಿ ಪಡೆ ಹೆಣೆದ ಬಲೆಯಲ್ಲಿ ಸಿಲುಕಿ ಬಂಧನಕ್ಕೆ ಒಳಗಾಗಿದೆ. ಬಂಧಿತರಲ್ಲಿ ಪೊಲೀಸ್ ಅಧಿಕಾರಿಯೊಬ್ಬರ ಮಗನೂ ಸೇರಿದ್ದಾನೆ.

ಆನೇಕಲ್ ಜನತೆಗೆ ನಿದ್ದೆಗೆಡಿಸಿದ ಆರೋಪಿಗಳನ್ನು ಹೆಡೆಮುರಿ ಕಟ್ಟಿ ಬಂಧಿಸುವಲ್ಲಿ ಆನೇಕಲ್ ಪೊಲೀಸರು ಯಶಸ್ವಿಯಾಗಿದ್ದಾರೆ. ಕಾರ್ಯಚರಣೆ ನಡೆಸಿ ಮೂರು ಜನ ಆರೋಪಿಗಳನ್ನು ಬಂಧನ ಮಾಡಿದ್ದಾರೆ.

ಮನೋಜ್ , ಸೂರ್ಯತೇಜ್ , ತೇಜಸ್ ಬಂಧಿತ ಆರೋಪಿಗಳಾಗಿದ್ದಾರೆ. 
ಕಳೆದ ಕೆಲವು ದಿನಗಳ ಹಿಂದೆ ಆನೇಕಲ್ ನ ಅಲಯನ್ಸ್ ಕಾಲೇಜಿನ‌ ಮುಂಭಾಗದ ಫುಡ್ ಕ್ಲಬ್ ನಲ್ಲಿ ದಾಂಧಲೆ ಸೃಷ್ಟಿ ಸಿದ್ದ  ಗ್ಯಾಂಗ್ ಇದಾಗಿತ್ತು. ಮದ್ಯಪಾನ ಸೇವಿಸಿ ಪುಡ್ ಕ್ಲಬ್ ನಲ್ಲಿ ಕಂಠಪೂರ್ತಿ ತಿಂದು ಬಿಲ್ ಕೇಳಿದ್ದಕ್ಕೆ ಹೋಟಲ್ ಮಾಲೀಕನಿಗೆ ಚಾಕುವಿನಿಂದ ಚುಚ್ಚಿ ಪರಾರಿ‌ಯಾಗಿದ್ದರು.

 ಕ್ಷುಲ್ಲಕ‌ ಕಾರಣಕ್ಕೆ ಗಲಾಟೆ ಮಾಡಿ,‌ ಎಲ್ಲೆಂದರಲ್ಲಿ ಅಮಾಯಕರಿಗೆ ಚಾಕುವಿನಿಂದ ಹಲ್ಲೆ ಮಾಡಿ ಪರಾರಿಯಾಗುತ್ತಿದ್ದರು.
ಆನೇಕಲ್ ಸುತ್ತಮುತ್ತಲಿನ ಹಲವು ಪೊಲೀಸ್ ಠಾಣೆಗೆ ಬೇಕಾಗಿದ್ದ ಗ್ಯಾಂಗ್ ಇದಾಗಿತ್ತು.

ಈ ಹಿಂದೆಯು ಸಹ ಕೊಲೆ ಯತ್ನ ಪ್ರಕರಣದಲ್ಲಿ ಆರೋಪಿಗಳು ಜೈಲು ಸೇರಿದ್ದರು. ನಂತರ ಬೇಲ್ ಮೇಲೆ ಹೊರ ಬಂದು ಮತ್ತೆ ಸಿಕ್ಕ ಸಿಕ್ಕ ಕಡೆಗಳಲ್ಲಿ ಹಲ್ಲೆ ನಡೆಸಿ ಗಲಾಟೆ ಮಾಡುತ್ತಿದ್ದರು.  

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ