"ನಾನು ಪತಿಯನ್ನು ಕಳೆದುಕೊಂಡಿದ್ದು ಪತಿಯ ಆಸ್ತಿ ಸಂಬಂಧ ಕೋರ್ಟ್‌ನಲ್ಲಿ ಕೇಸ್ ನಡೆಯುತ್ತಿದೆ. ಕೋರ್ಟ್‌ಗೆ ಹೋಗಲು ಸಹ ಅವರು ಬಿಡುತ್ತಿರಲಿಲ್ಲ. ಇತ್ತೀಚಿಗೆ ಆರೋಗ್ಯ ಸರಿಯಿಲ್ಲವೆಂದು ಮನೆಗೆ ಬಂದೆ. ವಾಪಸ್ ಬಾ ಎಂದು ಪದೇ ಪದೇ ಕಾಡಿಸಿದ ತಾರಾ ಅವರು ನಿನ್ನ ಮೇಲೆ ಮತ್ತು ನಿನ್ನ ತಾಯಿ, ಅಣ್ಣನ ಮೇಲೆ ಎಸ್‌ಪಿ ದೂರು ನೀಡುತ್ತೇನೆ ಎಂದು ಧಮ್ಕಿ ಹಾಕುತ್ತಿದ್ದರು. ನಾನು ಕೆಲಸಕ್ಕೆ ಹಿಂತಿರುಗಿಲ್ಲವೆಂದು ತಮ್ಮ ಪ್ರಭಾವ ಬಳಸಿ ಖಾಸಗಿ ಕಾಲೇಜಿನಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ ನನ್ನ ಅಣ್ಣ ಲೋಕೇಶ್‍ರನ್ನೂ ಕೆಲಸದಿಂದ ತೆಗೆಸಿದ್ದಾರೆ. ನಮಗೆ ಜೀವನ ನಡೆಸುವುದು ಕಷ್ಟವಾಗಿದೆ", ಎಂಬುದು ಲತಾ ಅಳಲು.
ಆದರೆ ತಮ್ಮ ವಿರುದ್ಧದ ಕಿರುಕುಳ ಆರೋಪವನ್ನು ತಾರಾ ಅಲ್ಲಗಳೆದಿದ್ದಾರೆ. ಆಕೆ ತುಂಬ ಚೆನ್ನಾಗಿ ನನ್ನ ಮಗುವನ್ನು ನೋಡಿಕೊಂಡಳು. ಆಕೆ ಪದೇ ಪದೇ ಕೋರ್ಟ್‌ಗೆಂದು ಊರಿಗೆ ಹೋಗುತ್ತಿದ್ದುದು ನನಗೆ ಸಮಸ್ಯೆಯನ್ನುಂಟು ಮಾಡುತ್ತಿದ್ದುದು ಹೌದು. ಆದರೆ ನಾನು ಯಾವುದೇ ಕಿರುಕುಳ ನೀಡಿಲ್ಲ. ಲತಾಳನ್ನು ನಾನು ಚೆನ್ನಾಗಿಯೇ ನೋಡಿಕೊಂಡಿದ್ದೇನೆ. ಆಕೆ ಕೂಡ ಚೆನ್ನಾಗಿ ಹೊಂದಿಕೊಂಡಿದ್ದಳು. ಆಕೆಯ ಅಣ್ಣ ಲೋಕೇಶ್ ಕೆಲಸ ಕಳೆದುಕೊಂಡಿದ್ದಕ್ಕೂ ನನಗೂ ಏನೂ ಸಂಬಂಧವಿಲ್ಲ. ಅವರು ಕೆಲಸ ಕಳೆದುಕೊಂಡರೆ ನನಗೇನು ಲಾಭ ಎಂದು ನಟಿ ತಾರಾ ಸ್ಪಷ್ಟ ಪಡಿಸಿದ್ದಾರೆ.