ಬೆಂಗಳೂರು: ಬಿಪಿಎಲ್-ಎಪಿಎಲ್ ಕಾರ್ಡ್ ಗಳ ಗೊಂದಲ ನಿವಾರಣೆಗೆ ಮುಂದಾಗಿರುವ ರಾಜ್ಯ ಆಹಾರ ಇಲಾಖೆ ಈಗ ಬಿಪಿಎಲ್ ಕಾರ್ಡ್ ದಾರರಿಗೆ ಗುಡ್ ನ್ಯೂಸ್ ಕೊಟ್ಟಿದೆ. ಮತ್ತೆ ಯಾವಾಗ ರೇಷನ್ ಸಿಗಲಿದೆ ಎಂಬುದನ್ನು ಘೋಷಿಸಿದೆ.
ಈಗಾಗಲೇ ಬಿಪಿಎಲ್ ಕಾರ್ಡ್ ರದ್ದಾಗಿರುವುದರ ಬಗ್ಗೆ ಆಹಾರ ಇಲಾಖೆ ಪರಿಷ್ಕರಣೆ ಆರಂಭಿಸಿದೆ. ಯಾರಿಗೆ ಅರ್ಹತೆಯಿದ್ದರೂ ಬಿಪಿಎಲ್ ಕಾರ್ಡ್ ರದ್ದಾಗಿದೆಯೋ ಅವರ ಕಾರ್ಡ್ ಗಳನ್ನು ಮರಳಿ ಬಿಪಿಎಲ್ ಗೆ ಮರುಸ್ಥಾಪನೆ ಮಾಡಲಾಗುತ್ತಿದೆ. ಯಾರಿಗೆ ಅರ್ಹತೆಯಿಲ್ಲವೋ ಅವರ ಕಾರ್ಡ್ ಗಳನ್ನು ಎಪಿಎಲ್ ಆಗಿಯೇ ಮುಂದುವರಿಸುತ್ತಿದೆ.
ಅದರಂತೆ ಈಗ ಆಹಾರ ಇಲಾಖೆಯ ಕೇಂದ್ರಗಳಲ್ಲಿ ಜನ ಬಿಪಿಎಲ್ ಕಾರ್ಡ್ ಪರಿಶೀಲನೆ ಮಾಡಿಸುತ್ತಿದ್ದಾರೆ. ಅದರಂತೆ ಅರ್ಹ ಫಲಾನುಭವಿಗಳ ಪ್ಯಾನ್ ಕಾರ್ಡ್, ಆಧಾರ್, ಆದಾಯ ತೆರಿಗೆ ರಶೀತಿ ಪರಿಶೀಲಿಸಿ ಬಿಪಿಎಲ್ ಮರಳಿ ನೀಡುವ ಬಗ್ಗೆ ಕ್ರಮ ಕೈಗೊಳ್ಳುತ್ತಿದೆ.
ನವಂಬರ್ 28 ರವರೆಗೆ ಎಪಿಎಲ್ ನಿಂದ ಬಿಪಿಎಲ್ ಗೆ ಮರು ವರ್ಗಾಯಿಸಲು ಸಮಯಾವಕಾಶ ನೀಡಲಾಗಿದೆ. ಶೇ. 90 ರಷ್ಟು ಕಾರ್ಡ್ ಗಳನ್ನು ಪರಿಶೀಲನೆ ಮಾಡಿ ಎಪಿಎಲ್ ನಿಂದ ಬಿಪಿಎಲ್ ಗೆ ಮರು ವರ್ಗಾವಣೆ ಮಾಡಲಾಗಿದೆ. ಅರ್ಹತೆಯಿಲ್ಲದ ಕಾರ್ಡ್ ಗಳನ್ನು ಎಪಿಎಲ್ ನಲ್ಲೇ ಉಳಿಸಿಕೊಳ್ಳಲಾಗಿದೆ.