ಗೃಹ ರಕ್ಷಕ ಸಿಬಂದಿ ಗುಡ್ ನ್ಯೂಸ್

ಬುಧವಾರ, 9 ಮಾರ್ಚ್ 2022 (18:16 IST)
ಪೊಲೀಸರಷ್ಟೇ ಹಗಲಿರುಳು ಬೆವರು ಹರಿಸು, ಐದು ಪೈಸೆ ಲಂಚಕ್ಕೆ ಕೈ ಚಾಚದೇ ಕಾರ್ಯ ನಿರ್ವಹಿಸುವ ಗೃಹ ರಕ್ಷಕ ಸ್ವಯಂ ಸೇವಕರಿಗೆ ರಾಜ್ಯ ಸರ್ಕಾರ ಬಂಪರ್ ಕೊಡುಗೆ ನೀಡಿದೆ. ಗೃಹ ರಕ್ಷಕ ದಳದ ಸ್ವಯಂ ಸೇವಕರ ಭತ್ಯೆಯನ್ನು ದುಪ್ಪಟ್ಟು ಹೆಚ್ಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
 ರಾಜ್ಯ ಸರ್ಕಾರ ಆದೇಶ ಹೊರಡಿಸಿರುವುದರಿಂದ ಸುಮಾರು 2025 ಗೃಹ ರಕ್ಷಕ ಸ್ವಯಂ ಸೇವಕರಿಗೆ ಅನುಕೂಲವಾಗಲಿದೆ. ರಾಜ್ಯದಲ್ಲಿ ಪೊಲೀಸ್ ಇಲಾಖೆಯನ್ನು ಹೊರತುಪಡಿಸಿ ಕರ್ತವ್ಯ ನಿರ್ವಹಿಸುತ್ತಿರುವ ಸುಮಾರು 2025 ಗೃಹ ರಕ್ಷಕ ಸ್ವಯಂಸೇವಕರ ಭತ್ಯೆಯನ್ನು ರಾಜ್ಯ ಸರ್ಕಾರ ಹೆಚ್ಚಿಸಿದೆ.
 
ಈ ಕುರಿತು ಪ್ರತಿಕ್ರಿಯೆ ನೀಡಿರುವ ಗೃಹ ಸಚಿವ ಆರಗ ಜ್ಞಾನೇಂದ್ರ, ಸರಕಾರದ ಈ ನಿರ್ಧಾರದಿಂದ ರಾಜ್ಯದ ವಿವಿಧ ಇಲಾಖೆಯಲ್ಲಿ ಗೃಹ ರಕ್ಷಕ ಸ್ವಯಂಸೇವಕರಾಗಿ ಕರ್ತವ್ಯ ನಿರ್ವಹಿಸುತ್ತಿರುವವರ ಬಹಳ ದಿನಗಳ ಬೇಡಿಕೆ ಈಡೆರಿಸಿದಂತೆ ಆಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
 
ಪೊಲೀಸ್ ಇಲಾಖೆ ಹೊರತು ಪಡಿಸಿ ಕರ್ತವ್ಯ ನಿರ್ವಹಿಸುತ್ತಿರುವ ಸರಿ ಸುಮಾರು 2025, ಗೃಹ ರಕ್ಷಕ ಹಾಗೂ ಪೌರ ರಕ್ಷಣಾ ಇಲಾಖೆಯ ಸ್ವಯಂ ಸೇವಕರಿಗೆ ನೀಡಲಾಗುತ್ತಿರುವ ದಿನ ಭತ್ಯೆಯನ್ನು ರೂಪಾಯಿ 600 ರೂ.ಗೆ ಹೆಚ್ಚಳ ಮಾಡಿ ಸರ್ಕಾರ ಆದೇಶಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ