9 ರ ಬಾಲಕಿ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ ಚಿಕ್ಕಪ್ಪ

ಬುಧವಾರ, 9 ಮಾರ್ಚ್ 2022 (09:58 IST)
ಲಕ್ನೋ: ತಿಂಡಿ ಕೊಡುವ ಆಸೆಯೊಡ್ಡಿ 9 ರ ಬಾಲಕಿ ಮೇಲೆ ಅತ್ಯಾಚಾರವೆಸಗಿದ ಚಿಕ್ಕಪ್ಪ ಆಕೆಯನ್ನು ಕೊಲೆ ಮಾಡಿದ್ದಾನೆ. ಇಂತಹದ್ದೊಂದು ಧಾರುಣ ಘಟನೆ ಆಲಿಗಢದಲ್ಲಿ ನಡೆದಿದೆ.

ಮೂವರು ಬಾಲಕಿಯರನ್ನು ತಿಂಡಿ ಕೊಡಿಸುವುದಾಗಿ ಅಂಗಡಿಗೆ ಕರೆದುಕೊಂಡು ಹೋಗಿದ್ದ ಆರೋಪಿ ಆ ಪೈಕಿ ಇಬ್ಬರನ್ನು ಮನೆಗೆ ಕಳುಹಿಸಿ 9 ವರ್ಷದ ಬಾಲಕಿಯನ್ನು ಜೊತೆಗೇ ಕರೆದೊಯ್ದು ಅತ್ಯಾಚಾರವೆಸಗಿದ್ದಾನೆ. ಬಳಿಕ ಇಟ್ಟಿಗೆಯಿಂದ ತಲೆಗೆ ಹೊಡೆದು ಕೊಲೆ ಮಾಡಿ ಶವವನ್ನು ಮುಚ್ಚಿಟ್ಟಿದ್ದಾನೆ.

ಇತ್ತ ಮಗುವನ್ನು ಕಾಣದೇ ಪೋಷಕರು ಹುಡುಕಾಡಿದ್ದಾರೆ. ಈ ವೇಳೆ ಚಿಕ್ಕಪ್ಪ ಕರೆದುಕೊಂಡು ಹೋಗಿರುವ ವಿಚಾರವನ್ನು ಸಹೋದರಿಯರು ಬಾಯ್ಬಿಟ್ಟಿದ್ದಾರೆ. ಅದರಂತೆ ಪೋಷಕರು ಚಿಕ್ಕಪ್ಪನ ವಿರುದ್ಧ ದೂರು ನೀಡಿದ್ದಾರೆ. ಇದೀಗ ಆರೋಪಿಯನ್ನು ಬಂಧಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ