ಈ ಭಾಗದ ರೈತರಿಗೆ ಗುಡ್ ನ್ಯೂಸ್

ಶುಕ್ರವಾರ, 29 ಮೇ 2020 (17:43 IST)
ಕೊರೊನಾ ಹಿನ್ನೆಲೆಯಲ್ಲಿ ರೈತರಿಗೆ ಬಿತ್ತನೆ ಬೀಜ  ಸಮಸ್ಯೆಯಾಗದಂತೆ  ಸಹಾಯವಾಣಿ ಆರಂಭಿಸಿ ಆ ಮೂಲಕ  ಬೀಜದ ಮಾಹಿತಿ ನೀಡಲಾಗುವುದು ಎಂದು   ಕೃಷಿ ವಿಶ್ವವಿದ್ಯಾನಿಲಯದ ವಿಶೇಷಾಧಿಕಾರಿಯಾದ  ಡಾ.ಬಸವೇಗೌಡ ತಿಳಿಸಿದ್ದಾರೆ.

ಲಾಕ್‌ಡೌನ್ ಹಿನ್ನೆಲೆಯಲ್ಲಿ ಈ ಬಾರಿ ಮುಂಗಾರು  ಬೀಜ ದಿನಾಚರಣೆ  ಆಚರಿಸಿಲ್ಲ. ಆದರೂ  ಈ ಮೊದಲು  ನಮಗೆ ಸಂಪರ್ಕದಲ್ಲಿದ್ದ  ಎಲ್ಲಾ ರೈತರಿಗೆ  ದೂರವಾಣಿ, ವಾಟ್ಸಪ್ ಮತ್ತಿತರ  ಸಂಪರ್ಕ ಜಾಲಗಳ ಮೂಲಕ   ಬೀಜದ ಮಾಹಿತಿ ನೀಡಲಾಗಿದೆ ಎಂದು ತಿಳಿಸಿದರು.

ಕೃಷಿ ವಿಶ್ವವಿದ್ಯಾನಿಲಯ  ಮತ್ತು  ರೈತರ ಮೂಲಕ ಉತ್ಪಾದಿಸಿದ  ಬೀಜ  ರೈತರಿಗೆ  ವಿತರಣೆ ಮಾಡಲು  ಸಿದ್ಧವಿದೆ. ಬೀಜ ಸೇರಿದಂತೆ ಇತರ  ಮಾಹಿತಿ ಪಡೆಯಲು ರೈತರು  1800 4250 470 ಸಹಾಯವಾಣಿಗೆ   ದೂರವಾಣಿ ಮಾಡಿ  ಮಾಹಿತಿ ಪಡೆಯಬಹುದಾಗಿದೆ.

ವಿಶೇಷವಾಗಿ ತೊಗರಿಯಲ್ಲಿ  ಟಿಎಸ್‌ಆರ್- 36 ಮತ್ತು ಜಿಆರ್‌ಬಿ -811 ಮತ್ತು ಸೂರ್ಯಕಾಂತಿಯಲ್ಲಿ  ಆರ್‌ಎಸ್‌ಎ-1877 ಹಾಗೂ ಶೇಂಗಾದಲ್ಲಿ ಕೆಡಿಜಿ-128 ಸೇರಿ  ಸಿರಿಧಾನ್ಯದ ಎಲ್ಲಾ ಬೀಜಗಳು ಲಭ್ಯ ಇವೆ ಎಂದಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ