ಭೂ ಪರಿವರ್ತನೆ ನಿರೀಕ್ಷೆ'ಯಲ್ಲಿದ್ದವರಿಗೆ ಗುಡ್ ನ್ಯೂಸ್

ಶುಕ್ರವಾರ, 18 ಫೆಬ್ರವರಿ 2022 (20:33 IST)
ಬೆಂಗಳೂರು :- ಇದುವರೆಗೆ ಭೂ ಪರಿವರ್ತನೆಗೆ ಕೋರಿ ಸಲ್ಲಿಸಲಾಗುತ್ತಿದ್ದಂತ ಎಲ್ಲಾ ಅರ್ಜಿಗಳಿಗೆ ಭೂ ಪರಿವರ್ತನಾ ಪೂರ್ವ ನಕ್ಷೆಯನ್ನು ತಯಾರಿಸಲಾಗುತ್ತಿತ್ತು. ಆದ್ರೇ. ಇದೀಗ ಏಕ ಮಾಲೀಕತ್ವದ ಪಹಣಿಯಲ್ಲಿನ ಪೂರ್ಣ ವಿಸ್ತೀರ್ಣಕ್ಕೆ ಭೂಪರಿವರ್ತನೆ ಕೋರಿ ಸಲ್ಲಿಸಲಾಗುತ್ತಿರುವಂತ ಅರ್ಜಿಗೆ ನಕ್ಷೆಯಿಂದ ವಿನಾಯಿತಿ ನೀಡಿ ರಾಜ್ಯ ಸರ್ಕಾರ ಆದೇಶಿಸಿದೆ.
ಈ ಮೂಲಕ ರೈತರಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದೆ.
ಈ ಕುರಿತಂತೆ ಭೂಮಾಪನ ಮತ್ತು ಭೂದಾಖಲೆಗಳ ಇಲಾಖೆಯ ಆಯುಕ್ತರು, ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದು, ಭೂ ಪರಿವರ್ತನಾ ಉದ್ದೇಶಕ್ಕಾಗಿ ಸಲ್ಲಿಸಬೇಕಾದ ಭೂಪರಿವರ್ತನಾ ನಕ್ಷೆಗಳನ್ನು ಕಡ್ಡಾಯವಾಗಿ ಮೋಜಿಣಿ ತಂತ್ರಾಂಶದ ಮೂಲಕವೇ ನಿರ್ವಹಿಸಲು ಮತ್ತು ಭೂಪರಿವರ್ತನೆ ಕೋರಿ ಸಲ್ಲಿಸಲಾಗುವ ಅರ್ಜಿಗಳಿಗೆ ಭೂಪರಿವರ್ತನಾ ಪೂರ್ವ ನಕ್ಷೆ ಅನ್ನು ಸಲ್ಲಿಸವುದನ್ನು ಕಡ್ಡಾಯಗೊಳಿಸಲಾಗಿರುತ್ತದೆ.
ಆದ್ರೇ ಪ್ರಸ್ತುತ ಏಕಮಾಲೀಕತ್ವದ ಪಹಣಿಯಲ್ಲಿನ ಪೂರ್ಣ ವಿಸ್ತೀರ್ಣಕ್ಕೆ ಭೂ ಪರಿವರ್ತನೆ ಕೋರಿ ಸಲ್ಲಿಸಲಾಗುವ ಅರ್ಜಿಗಳಿಗೆ ಭೂಪರಿವರ್ತನಾ ಪೂರ್ವ ನಕ್ಷೆಯಿಂದ ವಿನಾಯ್ತಿ ನೀಡಿದೆ. ಭೂಪರಿವರ್ತನಾ ತಂತ್ರಾಂಶದಲ್ಲಿಯೂ ಮಾರ್ಪಾಡು ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ