ಸಂತ್ರಸ್ತರಿಗೆ ಹಕ್ಕು ಪತ್ರಗಳನ್ನು ಉಪ ಮುಖ್ಯಮಂತ್ರಿ ವಿತರಣೆ ಮಾಡಿದ್ದಾರೆ.
ಬಾಗಲಕೋಟೆಯಲ್ಲಿ ಯುಕೆಪಿ ಯೋಜನೆಯ ಯುನಿಟ್ 2 ವ್ಯಾಪ್ತಿಯ ಬಾಡಿಗೆದಾರರು ಹಾಗೂ ಇತರೆ ಸಂತ್ರಸ್ತರಿಗೆ ಹಕ್ಕು ಪತ್ರಗಳನ್ನು ಉಪಮುಖ್ಯಮಂತ್ರಿ ಗೋವಿಂದ ಎಂ ಕಾರಜೋಳ ವಿತರಿಸಿದ್ದಾರೆ.
ಮಾಜಿ ಮುಖ್ಯಮಂತ್ರಿಗಳಾದ ದಿ. ರಾಮಕೃಷ್ಣ ಹೆಗಡೆ ಅವರು ಬಾಗಲಕೋಟೆ ನವನಗರವನ್ನು ಚಂಡಿಗಡ ದ ಮಾದರಿಯಲ್ಲಿ ನಿರ್ಮಿಸುವ ಕನಸನ್ನು ಹೊಂದಿದ್ದರು. ಬಿಡಿಟಿಎ ಅಧ್ಯಕ್ಷರಾಗಿರುವ ಶಾಸಕ ಡಾ. ವೀರಣ್ಣ ಚರಂತಿಮಠ ಅವರು ರಾಮಕೃಷ್ಣ ಹೆಗಡೆ ಅವರ ಕನಸನ್ನು ಸಾಕಾರಗೊಳಿಸಲಿದ್ದಾರೆ ಎಂದರು.
ನಿವೇಶನ ಪಡೆದ ಸಂತ್ರಸ್ತರು ನಿವೇಶನಗಳನ್ನು ಮಾರಾಟ ಮಾಡಬಾರದು. ಯೋಜನಾ ಬದ್ದವಾಗಿ ನೀಡಿದ ಈ ನಿವೇಶನಗಳು ತಮ್ಮ ಮನೆತನಕ್ಕೆ, ಮುಂದಿನ ಜನಾಂಗಕ್ಕೆ ಆಸ್ತಿಯಾಗಿ ರೂಪುಗೊಳ್ಳುತ್ತವೆ ಎಂದರು.