ಗೃಹ ಜ್ಯೋತಿ ಯೋಜನೆಗೆ ಜನರಿಂದ ಉತ್ತಮ ಸ್ಪಂದನೆ

ಶುಕ್ರವಾರ, 18 ಆಗಸ್ಟ್ 2023 (18:36 IST)
ಕಾಂಗ್ರೆಸ್ ಸರ್ಕಾರದ ಐದು ಮಹತ್ವಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಗೃಹ ಜ್ಯೋತಿ ಯೋಜನೆಗೆ ಜನರಿಂದ ಉತ್ತಮ ಸ್ಪಂದನೆ ಸಿಕ್ತಾ ಇದ್ದು, ಶೂನ್ಯ ಬಿಲ್ ನೋಡಿ ಜನ ಕೂಡ ಫುಲ್ ಖುಷಿಯಾಗಿದ್ದಾರೆ.ರಾಜ್ಯ ಕಾಂಗ್ರೆಸ್ ಸರಕಾರ ಚುನಾವಣೆಗೂ ಮುನ್ನ ಅಧಿಕಾರಕ್ಕೆ ಬಂದರೆ ಪ್ರತಿ ಮನೆಗೂ 200 ಯೂನಿಟ್ ಉಚಿತ ವಿದ್ಯುತ್ ನೀಡುತ್ತೇವೆ ಎಂದು ಭರವಸೆ ನೀಡಿತ್ತು. ಅದರಂತೆ ಅಧಿಕಾರಕ್ಕೆ ಬಂದಬಳಿಕ ಜೂನ್ 18ರಿಂದ ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸ್ವೀಕರಿಸುವುದಕ್ಕೆ ಆರಂಭ ಮಾಡಿತ್ತು. ಇನ್ನು ಜೂನ್ 18ರಿಂದ ಜುಲೈ 27ರವರೆಗೆ 1 ಕೋಟಿ 40ಲಕ್ಷ ದಷ್ಟು ಜನ ಗೃಹ ಜ್ಯೋತಿ ಯೋಜನೆಗೆ ನೋಂದಣಿ ಮಾಡಿಕೊಂಡಿದ್ದರು. ಇನ್ನು ಇವರಿಗೆಲ್ಲ ಆಗಸ್ಟ್ ತಿಂಗಳಲ್ಲಿ ಶೂನ್ಯ ಬಿಲ್ ನೀಡಲಾಗಿದ್ದು, ಶೂನ್ಯ ಬಿಲ್ ಪಡೆದ ಜನ ಫುಲ್ ಖುಷಿಯಾಗಿದ್ದಾರೆ.

ಇನ್ನು ಜುಲೈ 27ರಿಂದ ಆಗಸ್ಟ್ 15 ರವರೆಗೆ 10.83 ಲಕ್ಷ ಜನ ಯೋಜನೆಗೆ ನೋಂದಣಿ ಮಾಡಿಸಿಕೊಂಡಿದ್ದಾರೆ. ಇನ್ನು ಆಗಸ್ಟ್ ತಿಂಗಳಲ್ಲಿ ನೋಂದಣಿ ಮಾಡಿಸಿಕೊಂಡ ಅರ್ಹ ಅರ್ಜಿದಾರರಿಗೆ ಸಪ್ಟಂಬರ್  ತಿಂಗಳಿನಲ್ಲಿ ಶೂನ್ಯ ಬರಲಿದ್ದು, ಇದುವರೆಗೂ 1 ಕೋಟಿ 50 ಲಕ್ಷಕ್ಕೂ ಹೆಚ್ಚು ಜನ ನೊಂದಣಿ ಮಾಡಿಸಿಕೊಂಡಿದ್ದಾರೆ. ಇನ್ನು ಇದುವರೆಗೂ ಎಷ್ಟು ಜನ ಶೂನ್ಯ ಬಿಲ್ ಪಡೆದಿದ್ದರೆ ಅಂತಾ ನೋಡೋದಾದ್ರೆ

ಶೂನ್ಯ ಬಿಲ್ ನ ವಿವರಗಳು 
 
ಆಗಸ್ಟ್ ತಿಂಗಳಲ್ಲಿ ನೀಡಲಾದ ಒಟ್ಟು ಶೂನ್ಯ ಬಿಲ್ ಗಳ ಸಂಖ್ಯೆ -1,19,38,402
 
ಸಂಪೂರ್ಣ ಶೂನ್ಯ ಬಿಲ್ ಗಳ ಸಂಖ್ಯೆ -74,08,769
 
ಶೂನ್ಯವಲ್ಲದ ಬಿಲ್ ಗಳು – 45,29,633

ನೋಡಿದ್ರಲ್ಲ ವೀಕ್ಷಕರೇ ಇದುವರೆಗೂ 1 ಕೋಟಿ 50 ಲಕ್ಷಕ್ಕೂ ಅಧಿಕ ಜನ ಗೃಹ ಜೋತಿಗೆ ನೋಂದಣಿ ಮಾಡಿಸಿದ್ದು, ಶೇಕಡಾ 65% ರಷ್ಟು ಜನ ನೋಂದಣಿ ಮಾಡಿಸಿಕೊಂಡಿದ್ದಾರೆ ಎಂದು ಇಲಾಖೆ ತಿಳಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ