ಸರ್ಕಾರ ರಾಜ್ಯದ ರೈತರಿಗೆ ಅನ್ಯಾಯ ಮಾಡ್ತಿದೆ-ಮಾಜಿ ಸಿಎಂ ಬೊಮ್ಮಯಿ

ಗುರುವಾರ, 17 ಆಗಸ್ಟ್ 2023 (19:04 IST)
ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವ ವಿಚಾರವಾಗಿಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಪ್ರತಿಕ್ರಿಯಿಸಿದ್ದು,ಕಾವೇರಿ ವಿವಾದ ಹೊಸದೇನಲ್ಲ, ಯಾವ ಯಾವ ರಾಜ್ಯಕ್ಕೆ ನೀರು ಬೀಡಬೇಕು ಅನ್ನೋದು ತೀರ್ಮಾನ ಆಗಿದೆ.ಒಟ್ಟು 32 ಟಿಎಂಸಿ ಬದಲು 60 ಟಿಎಂಸಿ ಬಳಕೆ ಮಾಡಿದ್ದಾರೆ.ನಮ್ಮ ಸರ್ಕಾರ ಪ್ರತಿಪಾದನೆ ಮಾಡಬೇಕಾಗಿತ್ತು.ಅದನ್ನ ಮಾಡಿಲ್ಲ.ಈ ಸರ್ಕಾರ ರಾಜ್ಯದ ರೈತರಿಗೆ ಅನ್ಯಾಯ ಮಾಡ್ತಿದೆ.ಇವತ್ತು ತಮಿಳುನಾಡು, ನಮ್ಮ ರೈತರ ನೀರು ಕೇಳ್ತಿದ್ದಾರೆ.ಡ್ಯಾಮ್ ನಲ್ಲಿ ನೀರು ಇರೋದನ್ನ ನೋಡಿ ಕೇಳ್ತಿದ್ದಾರೆ.ಈಗಾಗಲೇ ಮಾನ್ಸೂನ್ ನಿಂತಿದೆ.ಇಷ್ಟೇಲ್ಲಾ ಗೊತ್ತಿದ್ರು, ಅವ್ರು ಸುಪ್ರೀಂ ‌ಕೋರ್ಟ್ ಗೆ ಹೋಗಿದ್ ಕೂಡಲೇ ನೀರು ಬಿಡ್ತಿದ್ದಾರೆ ಎಂದು ಮಾಜಿ ಸಿಎಂ ಬೊಮ್ಮಯಿ ಕಿಡಿಕಾರಿದ್ದಾರೆ.
 
ಇನ್ನೂ ಕಾಂಗ್ರೆಸ್‌ನಿಂದ ಅಪರೇಷನ್ ಹಸ್ತ ವಿಚಾರವಾಗಿ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಬಿಜೆಪಿಯಿಂದ ಯಾರು ಹೋಗಲ್ಲ.ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರವನ್ನ ಮರೆ ಮಾಡಲು ಹೀಗೆ ಮಾಡ್ತ ಇದ್ದಾರೆ.ಇನ್ನೂ ಎಸ್ ಟಿ ಸೋಮಶೇಖರ್ ಸಭೆ ವಿಚಾರ ಸ್ಥಳೀಯ ಬಿಜೆಪಿ ವಿರೋಧದ ಬಗ್ಗೆ ನಮಗೂ ಮಾಹಿತಿ ಬಂದಿದೆ.ನಾವು ಅದನ್ನ ಸರಿ ಪಡಿಸುತ್ತೇವೆ ಅಂತಾ ಮಾಜಿ ಸಿಎಂ ಬಸವರಾಜ್ ಬೊಮ್ಮಯಿ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ