ಸರ್ಕಾರಿ ಶಾಲೆಯಲ್ಲಿ ಎಲ್.ಕೆ.ಜಿ ಹಾಗೂ ಯು.ಕೆ.ಜಿ ಪ್ರಾರಂಭಿಸುವ ಸರ್ಕಾರದ ನಡೆಗೆ ಚಾಮರಾಜನಗರದಲ್ಲೂ ಅಂಗನವಾಡಿ ಕಾರ್ಯಕರ್ತೆಯರು ಬೃಹತ್ ಪ್ರತಿಭಟನೆ ನಡೆಸಿದರು. ನಗರದ ಪಚ್ಚಪ್ಪ ವೃತ್ತದಿಂದ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ 2 ಸಾವಿರಕ್ಕೂ ಹೆಚ್ಚು ಅಂಗನವಾಡಿ ಕಾರ್ಯಕರ್ತೆಯರು, ಕೇಂದ್ರ ಸರ್ಕಾರದ ವಿರುದ್ದ ಘೋಷಣೆ ಕೂಗಿ, ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿ ಕಛೇರಿ ಎದುರು ಕೆಲಕಾಲ ಧರಣಿ ನಡೆಸಿದ ಪ್ರತಿಭಟನಾಕಾರರು, ಸರ್ಕಾರಿ ಶಾಲೆಗಳಲ್ಲಿ ಎಲ್.ಕೆ.ಜಿ, ಯು.ಕೆ.ಜಿ, ತರಗತಿಗಳನ್ನ ಪ್ರಾರಂಭಿಸುತ್ತಿರುವುದು ಹಾಗೂ ಪಾರ್ಸಲ್ ರೂಪದಲ್ಲಿ ಮಕ್ಕಳಿಗೆ ಆಹಾರ ವಿತರಿಸುವ ಸರ್ಕಾರದ ನೀತಿಯನ್ನು ಖಂಡಿಸಿದರು. ಸಂಘದ ಅಧ್ಯಕ್ಷೆ ಸುಜಾತ, ಕೇಂದ್ರ ಸರ್ಕಾರ ಅಂಗನವಾಡಿ ಕಾರ್ಯಕರ್ತೆಯರಿಗೆ 50 ರಷ್ಟು ಅನುದಾನ ಕಡಿತ ಮಾಡಿರುವುದರಿಂದ 6 ತಿಂಗಳಾದರೂ ಸಂಬಳವಾಗುತ್ತಿಲ್ಲ, ಮಿನಿ ಅಂಗನವಾಡಿ ಕೇಂದ್ರಗಳಿಗೆ ಮತೃಪೂರ್ಣ ಮಾಡಲು ಸಮಸ್ಯೆಯಾಗಿದೆ ಅವರಿಗೆ ರಿಯಾಯಿತಿ ನೀಡಬೇಕು, ಬಾಲ ವಿಕಾಸ ಸಮಿತಿಯ ಅಧ್ಯಕ್ಷರಿಗೆ ನೀಡಿರುವ ನಕಾರಾತ್ಮಕ ಅಂಶಗಳನ್ನು ಕೈಬಿಡಬೇಕೆಂದು ಒತ್ತಾಯಿಸಿದರು.