ಡ್ರೋಣ್ ನಿಂದ ಕ್ರಿಮಿನಾಶಕ ಸಿಂಪಡಿಸುವುದಕ್ಕೆ ಸರ್ಕಾರದಿಂದ ತಡೆ
ಬುಧವಾರ, 22 ಜನವರಿ 2020 (10:49 IST)
ಬೆಂಗಳೂರು : ಡ್ರೋಣ್ ನಿಂದ ಕ್ರಿಮಿನಾಶಕ ಸಿಂಪಡಿಸಿದರೆ ದುಷ್ಪರಿಣಾಮವಾಗುವ ಹಿನ್ನಲೆ ಡ್ರೋಣ್ ನಿಂದ ಕ್ರಿಮಿನಾಶಕ ಸಿಂಪಡಿಸುವುದಕ್ಕೆ ಸರ್ಕಾರ ತಡೆಯೊಡ್ಡಿದೆ ಎಂಬುದಾಗಿ ತಿಳಿದುಬಂದಿದೆ.
ಡ್ರೋಣ್ ನಿಂದ ಕ್ರಿಮಿನಾಶಕ ಸಿಂಪಡಿಸಿದರೆ ಸುತ್ತಮುತ್ತಲಿನ ಜಮೀನುಗಳಿಗೂ ವ್ಯಾಪಿಸಿ ತೊಂದರೆ ಸಾಧ್ಯತೆ ಇದೆ. ಹೀಗಾಗಿ ಇದರ ಸಾಧಕ-ಬಾಧಕ ಬಗ್ಗೆ ವರದಿ ನೀಡುವಂತೆ ರಾಯಚೂರು ಕೃಪಿ ವಿಶ್ವವಿದ್ಯಾಲಯಕ್ಕೆ ಸರ್ಕಾರ ಸೂಚನೆ ನೀಡಿದೆ ಎನ್ನಲಾಗಿದೆ.
18 ಲಕ್ಷ ರೂ. ವೆಚ್ಚದಲ್ಲಿ ಈ ಅವಿಷ್ಕಾರವನ್ನು ಮಾಡಲಾಗಿತ್ತು. ಕ್ರಿಮಿನಾಶಕ ಸಿಂಪಡಿಸುವುದಕ್ಕೆ ಡ್ರೋಣ್ ಸಿದ್ದಪಡಿಸಲಾಗಿತ್ತು 20 ಲೀಟರ್ ಸಾಮರ್ಥ್ಯವುಳ್ಳ ಡ್ರೋಣ್ ಸಿದ್ದಪಡಿಸಲಾಗಿತ್ತು. ದುಬಾರಿ ವೆಚ್ಚದ ಡ್ರೋಣ್ ಖರೀದಿಗೆ ರೈತರಿಗೆ ಕಷ್ಟವಾಗುತ್ತದೆ ಎಂಬ ಕಾರಣದಿಂದ 10 ಲೀಟರ್ ಸಾಮರ್ಥ್ಯವುಳ್ಳ ಡ್ರೋಣ್ ಸಿದ್ಧತೆ ನಡೆಸಿದ್ದರು. ಆದರೆ ಇದರ ನಡುವೆಯೇ ಡ್ರೋಣ್ ಬಳಕೆಗೆ ಸರ್ಕಾರ ತಡೆ ನೀಡಿದೆ.