ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟ ಆರೋಪಿ ಆದಿತ್ಯರಾವ್ ಯಾರು ಗೊತ್ತಾ?

ಬುಧವಾರ, 22 ಜನವರಿ 2020 (10:29 IST)
ಬೆಂಗಳೂರು : ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟ ಆರೋಪಿ ಆದಿತ್ಯರಾವ್ ಇದೀಗ ಪೊಲೀಸರಿಗೆ ಶರಣಾಗಿದ್ದಾನೆ.


ಉಡುಪಿ ಮೂಲದವನಾದ ಆದಿತ್ಯರಾವ್ ಮಣಿಪಾಲದ ಹುಡ್ಕೋ ಕಾಲೋನಿಯಲ್ಲಿ ವಾಸವಾಗಿದ್ದ ಎಂಬುದಾಗಿ ತಿಳಿದುಬಂದಿದೆ. ಇಂಜಿನಿಯರಿಂಗ್ ಪದವಿ ಪಡೆದಿದ್ದ ಈತ ಏರ್ ಪೋರ್ಟ್ ನಲ್ಲಿ ಕೆಲಸಕ್ಕೆ ಅಲೆದಾಡುತ್ತಿದ್ದನಂತೆ. ಆದರೆ ಕೆಲಸ ಸಿಗದೆ ಮಾನಸಿಕವಾಗಿ ಕುಗ್ಗಿದ್ದ ಈತ ಈ ಹಿಂದೆ  ಹುಸಿ ಬಾಂಬ್ ಕರೆ ಮೂಲಕ 2 ವರ್ಷಗಳ ಹಿಂದೆ ಬಂಧನವಾಗಿದ್ದ. ಆದರೆ ಇದೀಗ ಇಂತಹ ಕೃತ್ಯಕ್ಕೆ ಮುಂದಾಗಿದ್ದಾನೆ.


ಹಾಗೇ ಆದಿತ್ಯರಾವ್ ತಂದೆ ನಿವೃತ್ತ ಬ್ಯಾಂಕ್ ಮ್ಯಾನೇಜರ್ ಆಗಿದ್ದು, ಆದಿತ್ಯ ಸಹೋದರ ಮೂಡಬಿದಿರೆಯಲ್ಲಿ ಬ್ಯಾಂಕ್ ನೌಕರನಾಗಿದ್ದು ತಿಂಗಳ ಹಿಂದೆ ಮಂಗಳೂರಿಗೆ ಚಿಲಿಂಬಿಗೆ ಶಿಫ್ಟ್ ಆಗಿದ್ದಾರೆ ಎನ್ನಲಾಗಿದೆ. ಹಾಗೇ ಈತನ ತಾಯಿ ಕೆಲ ಸಮಯದ ಹಿಂದೆ ಕ್ಯಾನ್ಸರ್ ನಿಂದ ಸಾವನಪ್ಪಿದ್ರು ಎಂಬುದಾಗಿ ತಿಳಿದುಬಂದಿದೆ.  

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ