ರಾಜ್ಯದಲ್ಲೂ ಶೇ.72ರಷ್ಟು ಮೀಸಲಾತಿ ತರಲು ಪ್ರಯತ್ನ - ಸಿದ್ದರಾಮಯ್ಯ
ಸೋಮವಾರ, 27 ಮಾರ್ಚ್ 2017 (08:41 IST)
ಕರ್ನಾಟಕದಲ್ಲಿ ಶೇ.72ರಷ್ಟು ಮೀಸಲಾತಿ ತರಲು ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಬೆಂಗಳೂರಿನಲ್ಲಿ ನಡೆದ ದಲಿತ ಸಂಘಟನೆಗಳ ಸಮಾವೇಶದಲ್ಲಿ ಮಾತನಾಡಿದ ಅವರು, ಸಂವಿಧಾನದಲ್ಲಿ ಶೇ.50ರಷ್ಟು ಮೀಸಲಾತಿಗೆ ಅವಕಾಶವಿದೆ. ಆದರೆ, ತಮಿಳುನಾಡಿನಲ್ಲಿ ಶೇ.69ರಷ್ಟು ಮೀಸಲಾತಿ ಕಲ್ಪಿಸಲಾಗಿದೆ ಎಂದರು.
ಇದೇವೇಳೆ, ಸಮಾಜ ಕಲ್ಯಾಣ ಸಚಿವ ಆಂಜನೇಯ ಸಿಎಂಗೆ ರಾಜ ಪೋಷಾಕು, ಪೇಟ ತೊಡಿಸಿ. ಕೈಗೆ ಖಡ್ಗ ನೀಡಿ ಸನ್ಮಾನ ಮಾಡಿದರು.
ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ನೀಡುತ್ತಿದ್ದ ಅನುದಾನವನ್ನ ಬಜೆಟ್`ನಲ್ಲಿ 27 ಸಾವಿರ ಕೋಟಿಗೆ ಏರಿಸಲಾಗಿದೆ. ಶಿಕ್ಷಣ ಮತ್ತು ಉದ್ಯೋಗದಲ್ಲೂ ದಲಿತರಿಗೆ ಹೆಚ್ಚಿನ ವಕಾಶಗಳು ಸಿಗಬೇಕಿದೆ ಎಂದು ಸಿಎಂ ಪ್ರತಿಪಾದಿಸಿದರು.