ಗುಜರಾತ್ ಸಿಎಂ ರೇಸ್‌ನಲ್ಲಿ ರಾಜ್ಯಪಾಲ ವಜುಭಾಯಿ ವಾಲಾ?

ಸೋಮವಾರ, 11 ಡಿಸೆಂಬರ್ 2017 (18:19 IST)
ಗುಜರಾತ್ ವಿಧಾನಸಭೆ ಚುನಾವಣೆ ಫಲಿತಾಂಶ ಡಿಸೆಂಬರ್‌ 18 ರಂದು ಪ್ರಕಟವಾಗಲಿರುವುದರಿಂದ ಗುಜರಾತ್ ಸಿಎಂ ರೇಸ್‌‌ನಲ್ಲಿ ವಜುಭಾಯಿ ವಾಲಾ ಇದ್ದಾರೆನ್ನಲಾಗಿದೆ.
ಪ್ರಧಾನಿ ಮೋದಿ ರಾಜ್ಯಪಾಲ ವಜುಭಾಯಿ ವಾಲಾಗೆ ಕರೆ ಮಾಡಿ, ಡಿಸೆಂಬರ್ 18 ರೊಳಗೆ ಎಲ್ಲಾ ಕೆಲಸಗಳನ್ನು ಮುಕ್ತಾಯಗೊಳಿಸಿ ಸಿದ್ದರಾಗಿರುವಂತೆ ಹೇಳಿದ್ದಾರೆ ಎನ್ನಲಾಗುತ್ತಿದೆ.
 
ರಾಜ್ಯಪಾಲಾ ವಜುಭಾಯಿ ವಾಲಾ, ರಾಜಜಭವನದ ಸಿಬ್ಬಂದಿಗಳೊಂದಿಗೆ ಸಭೆ ನಡೆಸಿ ಡಿಸೆಂಬರ್ 16 ರೊಳಗೆ ಎಲ್ಲಾ ಫೈಲ್‌ಗಳನ್ನು ಕ್ಲೀಯರ್ ಮಾಡುವಂತೆ ಆದೇಶ ನೀಡಿದ್ದಾರೆ ಎನ್ನಲಾಗುತ್ತಿದೆ. ರಾಜಭವನದ ಅಧಿಕಾರಿಗಳು ಹಗಲಿರಳು ಶ್ರಮಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
 
ವಜುಭಾಯಿ ವಾಲಾ ಗುಜರಾತ್‌ಗೆ ಮರಳುತ್ತಿರುವುದರಿಂದ ಸಿಎಂ ಹುದ್ದೆಯ ಮೇಲೆ ಕಣ್ಣಿಟ್ಟಿದ್ದ ವಿಜಯ್ ರೂಪಾಣಿ ಸೇರಿದಂತೆ ಇತರ ಹಿರಿಯ ನಾಯಕರಿಗೆ ಬಿಸಿತುಪ್ಪದಂತಾಗಿದೆ ಎಂದು ಮೂಲಗಳು ತಿಳಿಸಿವೆ. 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ